ಆಪರೇಷನ್ ಸಿಂಧೂರ್’​​ನಲ್ಲಿ ಹುತಾತ್ಮ 6 ಯೋಧರ ಹೆಸರು ಇದೇ ಮೊದಲ ಬಾರಿಗೆ ಬಹಿರಂಗ:

 

 

ದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಕಳೆದ ವರ್ಷದ ಮೇ ತಿಂಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ನಲ್ಲಿ ಹುತಾತ್ಮರಾದ ಸಶಸ್ತ್ರ ಪಡೆಗಳ 6 ಯೋಧರ ಹೆಸರನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕಗೊಳಿಸಲಾಗಿದೆ.

ಹುತಾತ್ಮ ಯೋಧರು: ಸುಬೇದಾರ್ ಮೇಜರ್ ಪವನ್ ಕುಮಾರ್, ರೈಫಲ್‌ಮನ್ ಸುನಿಲ್ ಕುಮಾರ್, ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್, ಅಗ್ನಿವೀರ್ ಮುರಳಿ ನಾಯಕ್, ಹವಾಲ್ದಾರ್ ಸುನಿಲ್ ಕುಮಾರ್ ಸಿಂಗ್ ಮತ್ತು ಭಾರತೀಯ ವಾಯುಪಡೆಯ ಸಾರ್ಜೆಂಟ್ ಸುರೇಂದ್ರ ಕುಮಾರ್ ಹುತಾತ್ಮರಾದ ಯೋಧರು.

ಈ ಪೈಕಿ ರೈಫಲ್‌ಮನ್ ಸುನಿಲ್ ಕುಮಾರ್​ಗೆ ಮರಣೋತ್ತರವಾಗಿ ವೀರ ಚಕ್ರ ಮತ್ತು ಸಾರ್ಜೆಂಟ್ ಸುರೇಂದ್ರ ಕುಮಾರ್​ಗೆ ಮರಣೋತ್ತರ ವಾಯು ಸೇನಾ ಪದಕ ನೀಡಿ ಗೌರವಿಸಲಾಗಿದೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಲ್ಲಿ ಭಾರತೀಯ ಸೇನೆಯ ಐವರು, ವಾಯುಪಡೆಯ ಓರ್ವ ಸಾರ್ಜೆಂಟ್ ಸೇರಿದ್ದಾರೆ.

ಈ ಸೈನಿಕರ ಹೆಸರುಗಳನ್ನು ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ಗ್ರಾನೈಟ್ ಶಿಲಾಫಲಕದ ಮೇಲೆ ಕೆತ್ತಲಾಗುತ್ತದೆ.

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ‘ತ್ಯಾಗ ಚಕ್ರ’ (ತ್ಯಾಗ ವೃತ್ತ)ವನ್ನು ರಾಷ್ಟ್ರದ ಹುತಾತ್ಮರಿಗೆ ಸಮರ್ಪಿಸಲಾಗಿದೆ. ಇದು 16 ವೃತ್ತಾಕಾರದ ಗ್ರಾನೈಟ್ ಶಿಲಾಫಲಕಗಳನ್ನು ಒಳಗೊಂಡಿದೆ. ಸ್ವಾತಂತ್ರ್ಯಾ ನಂತರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬ ಸೈನಿಕನ ಹೆಸರುಗಳು, ಶ್ರೇಣಿಗಳು ಮತ್ತು ಘಟಕಗಳನ್ನು ಈ ಶಿಲಾಫಲಕದ ಮೇಲೆ ಕೆತ್ತಲಾಗಿದೆ. ಇದೀಗ ‘ಆಪರೇಷನ್ ಸಿಂಧೂರ್​ನ ಈ ಆರು ಯೋಧರ ಹೆಸರುಗಳು ಸ್ಮಾರಕದ ಶಾಶ್ವತ ಭಾಗವಾಗುತ್ತವೆ

error: Content is protected !!