ಪ್ರಜಾಪ್ರಕಾಶ ನ್ಯೂಸ್ ವರದಿಯ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು: ತಾ.ಪಂ ಕ್ವಾಟ್ರಸ್ ಆವರಣದ ಬಳಿಯ ಮರದ ಕೊಂಬೆಗಳ ತೆರವು:

 

 

ಬೆಳ್ತಂಗಡಿ: ನ್ಯಾಯಾಲಯ, ಸೇರಿದಂತೆ ಇತರ ಭಾಗಗಳಿಗೆ ಸಂಪರ್ಕಿಸುವ  ರಸ್ತೆಯ ಬದಿಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಕಡಿದು ಹಾಕಲಾಗಿದ್ದ ಮರದ ತುಂಡುಗಳು ಸಹಿತ ಕೊಂಬೆಗಳ ತೆರವು ಕೆಲಸ ಮಾಡಲಾಗಿದೆ.ಎರಡು ದಿನಗಳ ಹಿಂದೆಯಷ್ಟೆ ಸಾರ್ವಜನಿಕ ತೊಂದರೆಯ   ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವಿಸ್ತೃತ ವರದಿಯನ್ನು ಮಾಡುವ ಮೂಲಕ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಿತ್ತು. ವರದಿ ಪ್ರಕಟವಾದ   24 ಗಂಟೆಯೊಳಗೆ ಅಧಿಕಾರಿಗಳು ರಸ್ತೆ ಬದಿಯ ಮರದ ಗೆಲ್ಲುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ. ಅದರೂ ಕಂಪೌಂಡ್ ನಲ್ಲಿ ಸಿಕ್ಕಿಕೊಂಡಿರುವ ದೊಡ್ಡ ಗಾತ್ರದ ಮರದ ಗೆಲ್ಲೊಂದು ಹಾಗೆಯೇ ಇದೆ. ಒಂದು ವೇಳೆ ಅದರ ತೆರವು  ಮಾಡದಿದ್ದಲ್ಲಿ ಶಿಥಿಲಾವಸ್ಥೆಯಲ್ಲಿರುವ ತಾ.ಪಂ ಆವರಣ ಗೋಡೆ ಭಾರ ತಾಳಲಾರದೆ ಕುಸಿಯುವ ಸಾಧ್ಯತೆ ಇದ್ದು ಅದರ ಬದಿಯಲ್ಲಿ ಯಾರಾದರೂ ಪಾದಚಾರಿಗಳು ನಡೆದುಕೊಂಡು ಹೋಗುವಾಗ ,ಅಥವಾ  ದ್ವಿಚಕ್ರ  ಸೇರಿದಂತೆ ಇತರೆ ವಾಹನಗಳು ನಿಂತಿದ್ದರೆ  ಮೇಲೆ ಬಿದ್ದು ಅನಾಹುತ ಸಂಭವಿಸುವ ಅಪಾಯ ಇದೆ.

ಇದನ್ನೂ ಓದಿ:

ಬೆಳ್ತಂಗಡಿ,:ತಾ.ಪಂ‌. ಕ್ವಾಟ್ರಸ್ ಆವರಣ ಗೋಡೆ ಮೇಲೆ ನೇತಾಡುತಿದೆ ಅಪಾಯಕಾರಿ ಮರದ ಕೊಂಬೆ: ರಸ್ತೆ ಬದಿಯಲ್ಲಿದೆ ತೆರವುಗೊಳ್ಳದೆ, ಕೊಳೆಯುತ್ತಿದೆ ತುಂಡರಿಸಿ ಹಾಕಿದ ಮರದ ಗೆಲ್ಲುಗಳು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಅಸಾಮಾಧಾನ:

 

 

ಇದನ್ನೂ ತಕ್ಷಣ ತೆರವುಗೊಳಿಸಬೇಕಾಗಿದೆ. ವರದಿಯ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತು ತೆರವುಗೊಳಿಸಿ ಸ್ವಚ್ಛಗೊಳಿಸಿರುವುದು ಹಾಗೂ ಸಾಮಾಜಿಕ ಕಳಕಳಿಯಿಂದ ವರದಿ ಪ್ರಕಟಿಸಿದ ಪ್ರಜಾಪ್ರಕಾಶ ನ್ಯೂಸ್ ತಂಡಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!