ಕಲ್ಮಂಜ : ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಶಾಸಕ ಹರೀಶ್ ಪೂಂಜಾ ಭೇಟಿ – ವೈಯಕ್ತಿಕ ನೆಲೆಯಲ್ಲಿ ಆರ್ಥಿಕ‌ ನೆರವು: !

 

 

 

ಬೆಳ್ತಂಗಡಿ : ಕಳೆದ ಎರಡು ದಿನಗಳ ಹಿಂದೆ ಧಾರಕಾರ ಮಳೆಯಿಂದಾಗಿ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸಂಕಷ್ಟ ಎದುರಿಸುತ್ತಿರುವ ಕುಟುಂಬಸ್ಥರಿಗೆ ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ಸಹಾಯ ನೀಡಿದರು.

ಗ್ರಾಮದ ಗಾಣದಕೊಟ್ಟಿಗೆ ನಿವಾಸಿ ಗಂಗಾಧರ ಗೌಡ ಎಂಬವರ ಮನೆ ಬಳಿಯ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿತ್ತು. ಮುಂಡಾಜೆ ಗ್ರಾಮದ ನಿವಾಸಿ ಚೋಮು ನಲಿಕೆ ಎಂಬವರ ಮನೆ ಭಾರಿ ಮಳೆಗೆ ಕುಸಿದು ಬಿದ್ದಿತ್ತು. ಸತ್ಯನಪಲ್ಕೆ ನಿವಾಸಿ ಯಮುನಾ ಎಂಬವರ ಮನೆಯೂ ಹಾನಿಯಾಗಿತ್ತು.

ಧರ್ಮಸ್ಥಳ ಗ್ರಾಮ ಕಟ್ಟದ ಬೈಲು ನಾರಾಯಣ ಗೌಡ, ಅನಂತ ಶೆಟ್ಟಿಗಾರ್ ಮನೆಯ ಹಿಂಬದಿಯ ಗುಡ್ಡ ಕುಸಿದು, ಸಮಸ್ಯೆ ಎದುರಾಗಿತ್ತು. ಮಾಹಿತಿ ಪಡೆದ ಶಾಸಕರು ಹಾನಿಗೊಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರ್ಮಸ್ಥಳ ಗ್ರಾಮದ ಎರಡು ಕುಟುಂಬಗಳಿಗೆ ಆರ್ಥಿಕ ನೆರವಿಗಾಗಿ ಚೆಕ್ ವಿತರಿಸಿದರು.

ಮನೆಯವರೊಂದಿಗೆ ಮಾತನಾಡಿದ ಅವರು, ತಕ್ಷಣವೇ ಮಳೆ ಹಾನಿ ಪರಿಹಾರವನ್ನು ನೀಡುವ ಭರವಸೆಯನ್ನೂ ನೀಡಿದರು.

error: Content is protected !!