ಬೆಳ್ತಂಗಡಿ,:ತಾ.ಪಂ‌. ಕ್ವಾಟ್ರಸ್ ಆವರಣ ಗೋಡೆ ಮೇಲೆ ನೇತಾಡುತಿದೆ ಅಪಾಯಕಾರಿ ಮರದ ಕೊಂಬೆ: ರಸ್ತೆ ಬದಿಯಲ್ಲಿದೆ ತೆರವುಗೊಳ್ಳದೆ, ಕೊಳೆಯುತ್ತಿದೆ ತುಂಡರಿಸಿ ಹಾಕಿದ ಮರದ ಗೆಲ್ಲುಗಳು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಅಸಾಮಾಧಾನ:

 

 

 

ಬೆಳ್ತಂಗಡಿ:ಅಪಾಯಕಾರಿ ಎಂಬ ಕಾರಣಕ್ಕೆ ದೊಡ್ಡ ಮರಗಳ ಗೆಲ್ಲುಗಳನ್ನು ಮೆಸ್ಕಾಂ ಹಾಗೂ ಪಟ್ಟಣ ಪಂಚಾಯತ್ ಸೂಚನೆಯಂತೆ ಅರಣ್ಯ ಇಲಾಖೆ ತುಂಡರಿಸಿದ್ದು, ಅದರೆ ಈ ಕೊಂಬೆಗಳನ್ನು ತೆರವುಗೊಳಿಸದೇ ಇರುವ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತ್ ವಿರುದ್ದ ಅಸಾಮಾಧಾನ ಹೊರಹಾಕಿದ್ದಾರೆ.

 

 

 

ಮಳೆಗಾಲ ಪ್ರಾರಂಭದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹೋಗುವ ರಸ್ತೆಯಲ್ಲಿ ತಾಲೂಕು ಪಂಚಾಯತ್ ಆವರಣದೊಳಗಿದ್ದ ಅಪಾಯಕಾರಿ ಮರಗಳ ಗೆಲ್ಲುಗಳನ್ನು ಅರಣ್ಯ ಇಲಾಖೆಯ ಮೂಲಕ ತೆರವುಗೊಳಿಸಲಾಗಿತ್ತು. ಅದರೆ ತುಂಡರಿಸಿ ಹಾಕಿರುವ ಮರದ ದೊಡ್ಡ ಗೆಲ್ಲುಗಳು ರಸ್ತೆ ಬದಿಯಲ್ಲಿ ಹಾಗೆಯೇ ಇದ್ದು ಕೊಳೆತು ನಾರುತಿದೆ. ದಿನಂಪ್ರತಿ ನ್ಯಾಯಾಲಯ, ಅರಣ್ಯ ಇಲಾಖೆ , ಟೆಲಿಪೋನ್ ಕಛೇರಿಗೆ ಸೇರಿದಂತೆ ಇನ್ನಿತರ ನೂರಾರು ವಾಹನಗಳು ಸಾರ್ವಜನಿಕರು, ಶಾಲಾ ಮಕ್ಕಳು ಈ ರಸ್ತೆಯಲ್ಲಿ ದಿನನಿತ್ಯ ಓಡಾಟ ನಡೆಸುತಿದ್ದು, ರಸ್ತೆ ಬದಿಯಲ್ಲಿ ಇರುವ ಈ ಕೊಂಬೆಗಳ ರಾಶಿಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿವೆ. ಅದಲ್ಲದೇ ಮಳೆ ಬಂದರೆ ಇಲ್ಲಿ ನೀರು ನಿಂತು ಅದರ ತರೆಗೆಲೆಗಳು ಕೊಳೆತು ಸೊಳ್ಳೆ ಗಳ ಕಾಟದಿಂದ ಮತ್ತಷ್ಟು ಸಮಸ್ಯೆಗಳನ್ನು ಅನುಭವಿಸುವಂತಾಗುತ್ತಿದೆ.

 

 

ಅದಲ್ಲದೆ ಪಾದಾಚಾರಿಗಳು ರಸ್ತೆಯಲ್ಲೆ ನಡೆದಾಡುವ ಸ್ಥಿತಿ ಇದೆ.ತಾ.ಪಂ ಆವರಣ ಗೋಡೆಯಲ್ಲಿ ದೊಡ್ಡ ಕೊಂಬೆಯೊಂದು ಸಿಲುಕಿಕೊಂಡಿದ್ದು ಮಳೆಗೆ ಗೋಡೆ ಕುಸಿದರೆ ತೊಂದರೆ ಆಗುವ ಸಾಧ್ಯತೆಯಿದ್ದು ಈ ಬಗ್ಗೆ ಪಟ್ಟಣ ಪಂಚಾಯತ್ ಗೆ ತೆಗೆಯುವಂತೆ ಸೂಚಿಸಿದರೂ ಅದನ್ನು ತೆರವುಗೊಳಿಸುವ ಕೆಲಸ ಮಾಡದಿರುವುದು ಬೇಸರ ತರಿಸಿದೆ. ಸ್ವಚ್ಚತೆಯ ಪಾಠ ಮಾಡುವ ಅಧಿಕಾರಿಗಳು ಈ ಬಗ್ಗೆ ಮೌನವಾಗಿದ್ದಾರೆ. ತಾಲೂಕು ಪಂಚಾಯತ್ ಆವರಣದ ಬಳಿಯಲ್ಲೇ ಅದು ಕೂಡ ನ್ಯಾಯಾಲಯಕ್ಕೆ ಹೋಗುವ ರಸ್ತೆಯಲ್ಲಿ ಈ ರೀತಿಯಾದರೆ ಉಳಿದ ಕಡೆಗಳ ಸ್ಥಿತಿ ಹೇಗಿರಬಹುದು.ಅದ್ದರಿಂದ ತಕ್ಷಣ ಇದನ್ನು ತೆರವುಗೊಳಿಸಬೇಕು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ದಿನನಿತ್ಯ ಓಡಾಡುವ ಸಾರ್ವಜನಿಕರೊಬ್ಬರು ಬೇಸರವನ್ನು ಪ್ರಜಾಪ್ರಕಾಶ ನ್ಯೂಸ್ ನೊಂದಿಗೆ ಹಂಚಿಕೊಂಡಿದ್ದಾರೆ.

error: Content is protected !!