
ಬೆಂಗಳೂರು: ಡಿಕೆ ಶಿವಕುಮಾರ್, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಕ್ಷಣಗಣನೆ ಪ್ರಾರಂಭವಾಗಿದೆ. ಅತ್ತ ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ. ಡಿಕೆಶಿ ಅವರೊಂದಿಗೆ ಒಟ್ಟು 13 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಜಿ ಪರಮೇಶ್ವರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಮೂಲಗಳ ಪ್ರಕಾರ, ಬೆಂಗಳೂರಿನ ಲೋಕಭವನದಲ್ಲಿ ಸಂಜೆ 4.05 ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸಚಿವರ ಪಟ್ಟಿಯನ್ನು ಹೈಕಮಾಂಡ್ ಅಂತಿಮಗೊಳಿಸಿದೆ.
ಡಿ ಕೆ ಶಿವಕುಮಾರ್ ಅವರ ಸಂಪುಟ ಸೇರುವ ಸಚಿವರ ಪಟ್ಟಿ ಇಂತಿದೆ:
ಡಿ.ಕೆ.ಶಿವಕುಮಾರ್, ಸಿಎಂ
ಜಿ.ಪರಮೇಶ್ವರ್, ಡಿಸಿಎಂ
ಕ್ಯಾಬಿನೆಟ್ ದರ್ಜೆ ಸಚಿವರು
ಎಂ.ಬಿ.ಪಾಟೀಲ್
ಕೆ.ಜೆ.ಜಾರ್ಜ್
ಕೆ.ಎಚ್.ಮುನಿಯಪ್ಪ
ರಾಮಲಿಂಗಾರೆಡ್ಡಿ
ಸತೀಶ್ ಜಾರಕಿಹೊಳಿ
ಯು.ಟಿ.ಖಾದರ್
ಕೃಷ್ಣಬೈರೇಗೌಡ
ಪ್ರಿಯಾಂಕ್ ಖರ್ಗೆ
ಯತೀಂದ್ರ ಸಿದ್ದರಾಮಯ್ಯ
ಶರಣಪ್ರಕಾಶ್ ಪಾಟೀಲ್
ಬೈರತಿ ಸುರೇಶ್
ಈಶ್ವರ್ ಖಂಡ್ರೆ
ಬಹುತೇಕ ಇದೇ ಅಂತಿಮ ಎಂದು ಮೂಲಗಳು ಖಚಿತ ಪಡಿಸಿವೆ.