ಬಂಗಾಡಿ ಸತ್ಯ ಸಾರಮಾನಿ ಕಾನದ ಕಟದ ದೈವಸ್ಥಾನ , ವಿಜ್ಞಾಪಣಾ ಪತ್ರ ಬಿಡುಗಡೆ:

 

 

ಬಂಗಾಡಿ:ಶ್ರೀ ಕ್ಷೇತ್ರ ಬಂಗಾಡಿ ಸತ್ಯಸಾರಮಾನಿ ಕಾನದ ಕಟದ ದೈವಸ್ಥಾನದ ವಾರ್ಷಿಕ ಪರ್ವ ಮತ್ತು ಜೀರ್ಣೋದ್ಧಾರ ವಿಜ್ಞಾಪಣಾ ಪತ್ರವನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ
ಶಾಸಕಿ ಕು ಭಾಗೀರಥಿ ಮುರುಳ್ಯ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿ ಸತ್ಯಸಾರಮಾನಿ ಕಾನದ ಕಟದರ ಜನ್ಮಭೂಮಿಯಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಆಗಲಿರುವುದು ಸಂತೋಷದ ವಿಚಾರ ಈ ಕಾರ್ಯಕ್ಕೆ ಸರಕಾರದ ವತಿಯಿಂದ
ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವಲ್ಲಿ
ನಾನು ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ” ಶ್ರೀ ಸತ್ಯಸಾರಮಾನಿ ಕಾನದ ಕಟದ ಮೂಲಕ್ಷೇತ್ರ ಅಲೇರಿಯ ಅಭಿವೃದ್ದಿಗೆ ಈಗಾಗಲೇ ಶಿಲನ್ಯಾಸ ನೆರವೇರಿದ ಇದೇ ಸಂಧರ್ಭದಲ್ಲಿ ಕಾನದ ಕಟದ ಜನ್ಮಭೂಮಿ ಬಂಗಾಡಿ ಯಲ್ಲೂ ಅಭಿವೃದ್ದಿಗೆ ಚಾಲನೆ ಅಗುತ್ತಿರುವುದು ಸಂತೋಷದ ವಿಚಾರ
ಕಾನದ ಕಟದರ ಕುಲಬಾಂಧವರಾದ ನಾವುಗಳು ಮನೆಮನೆಗಳಿಗೆ ಈ ವಿಚಾರವನ್ನು ತಿಳಿಸಿ
ಜೀರ್ಣೋದ್ಧಾರದ ಬಗ್ಗೆ ಅರ್ಥಿಕ ಕ್ರೋಢೀಕರಣಕ್ಕೆ
ನಾವೆಲ್ಲರೂ ಒಂದಾಗಿ ಕೈ ಜೋಡಿಸಬೇಕು
ಎಂದು ಹೇಳಿದರು.

ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಹರಿಯಪ್ಪ ಮುತ್ತೂರು ಮಾತನಾಡುತ್ತಾ ಶ್ರೀ ಕ್ಷೇತ್ರ ಬಂಗಾಡಿ ಸತ್ಯಸಾರಮಾನಿ ಕಾನದ ಕಟದ ಜನ್ಮಭೂಮಿ
ಯು ಅಭಿವೃದ್ಧಿಗೆ ಸರ್ಕಾರ ವತಿಯಿಂದ
ಅನುದಾನ ಕೊಡಿಸುವಲ್ಲಿ ಸಹಕಾರ ನೀಡುತ್ತೇನೆ
ಈ ಕ್ಷೇತ್ರ ಜನಸಾಮಾನ್ಯರ ಧಾರ್ಮಿಕ ಕ್ಷೇತ್ರವಾಗಿ ಮೂಡಿ ಬರಲಿ ಎಂದು ಶುಭಹಾರೈಸಿದರು.
ಬೆಳ್ತಂಗಡಿ ತಾಲೂಕು ಕೆಡಿಪಿ ಸದಸ್ಯ
ಬೇಬಿ ಸುವರ್ಣ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಂಜೀವ ಆರ್. ಕ್ಷೇತ್ರದ ಅಭಿವೃದ್ಧಿ ಗೆ
ಎಲ್ಲರ ಸಹಕಾರ ಕೋರಿದರು.
ವೇದಿಕೆಯಲ್ಲಿ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಬೇಬಿ ಕಡಿರುದ್ಯಾವರ ,ಆಡಳಿತ ಸಮಿತಿ ನಿಕಟಪೂರ್ವ ಅಧ್ಯಕ್ಷ ಗೋಪಾಲ ಇಂದಬೆಟ್ಟು,
ಉಪಸ್ಥಿತರಿದ್ದರು.

error: Content is protected !!