
ಬೆಳ್ತಂಗಡಿ, : ಹಿಂದೂ ಸಮಾಜದ ಸಂಸ್ಕ್ರತಿ, ಸಂಸ್ಕಾರಕ್ಕೆ ಕೇರಳ ಸಮಾಜ ಶಕ್ತಿ ತುಂಬಿದೆ. ಕೇರಳ ಸಾಂಪ್ರದಾಯಿಕ ವಿಷುಕಣಿ ಹಬ್ಬ ಸಂಸ್ಕಾರ, ಸಂಸ್ಕ್ರತಿ ಯನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ.
ಎಂದು ಶಾಸಕ ಹರೀಶ್ ಪೂಂಜ ಅಭಿಪ್ರಾಯಪಟ್ಟರು ಅವರು ಭಾನುವಾರ ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿ ವಿಷುಕಣಿ ಆಚರಣಾ ಸಮಿತಿ ವತಿಯಿಂದ ನಡೆದ 5ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷುಕಣಿ ಹಬ್ಬ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ದೈವಾರಾಧನೆ, ದೇವತಾರಾಧನೆಯನ್ನು ಕೇರಳ ಪರಂಪರೆಯಲ್ಲಿ ನಡೆಸುತ್ತಿದ್ದೇವೆ. ಅವರು ಹಾಕಿಕೊಟ್ಟ ಚೌಕಟ್ಟಿನ ರೀತಿಯಲ್ಲಿ ಆರಾಧನೆ ನಡೆಯುತ್ತದೆ. ಬೆಳ್ತಂಗಡಿಯಲ್ಲಿ ಇರುವ ಕೇರಳ ಭಾಷಿಗರು ಕಮ್ಮಿ ಇದ್ದೇವೆ ಎನ್ನುವ ಭಾವನೆ ಬೇಡ ನಾವೆಲ್ಲ ಒಂದೇ, ಭಾರತ ಮಾತೆಯ ಮಕ್ಕಳು ಎಂದರು.
ಪ್ರಸಾದ್ ನೇತ್ರಾಲಯದ ಮುಖ್ಯಸ್ಥ ಡಾ.ಕೃಷ್ಣಪ್ರಸಾದ್ ಅವರು ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುವ ಎಲ್ಲಾ ಜನಪರ ವಿಶೇಷ ಕಾರ್ಯಕ್ರಮಗಳು ಇನ್ನೂ ಮುಂದೆಯೂ ಶಾಸಕರ ನೇತೃತ್ವದಲ್ಲಿ ನಡೆಯಲಿ. ನಾವೆಲ್ಲಾ ಹಿಂದೂ ಎಲ್ಲಾ ಸಮುದಾಯದವರು ನನ್ನವರು ಎಂದು ಭಾವನೆ ಇನ್ನಷ್ಟೂ ಮೂಡಲಿ. ಶಾಸಕರ ಪತ್ರಮುಖೇನಾ ನಮ್ಮ ನೇತ್ರಾಲಯಕ್ಕೆ ಯಾರಾದರೂ ಅಂಧ ವ್ಯಕ್ತಿಗಳು ಬಂದರೆ ಅಂತವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗುವುದು, ಶಾಸಕರ ಸಹಯೋಗದೊಂದಿಗೆ ಬೆಳ್ತಂಗಡಿಯನ್ನು ಅಂಧಮುಕ್ತವನ್ನಾಗಿ ಮಾಡಲಾಗುವುದು ಎಂದರು.
ವಕೀಲ ಉಮೇಶ್ ಟಿ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಮನ್ ಕಿ ಭಾತ್ ಪ್ರಮುಖ ಸೀತಾರಾಮ ಬೆಳಾಲು, ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಹರೀಸದ್ ಕಳೆಂಜ, ಯಶವಂತ್ ಪುದುವೆಟ್ಟು, ಉಜಿರೆ ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷೆ ಉಷಾ ಕಾರಂತ್, ಪುಷ್ಪ ಆರ್ ಶೆಟ್ಟಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ವಿಷು ಕಣಿ ಆಚರಣಾ ಸಮಿತಿಯ ಅನಿಲ್ ಶಿಬಾಜೆ, ಬಾಲಕೃಷ್ಣ ನೈಮಿಷ, ಪ್ರಸಾದ್ ಬಿ.ಎಸ್, ದಿವಿನೇಶ್, ಸದಾನಂದ ಉಂಗಿಲಬೈಲು,ಪ್ರಸಾದ್ ಕೆವಿ, ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.33 ಬಗೆಯ ವಿವಿಧ ಆಹಾರ ಖಾಧ್ಯಗಳು,
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಕ್ಕಳು ಮಹಿಳೆಯರು ಸೇರಿದಂತೆ ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಪಟ್ಟರು.