ಕುಕ್ಕಳ ಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

 

 

 

ಮಡಂತ್ಯಾರ್: ಕುಕ್ಕಳ ಬೆಟ್ಟು ಅಂಗನವಾಡಿ ಕೇಂದ್ರದಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಜೆ.ಸಿ. ಪ್ರಸನ್ನ ಶೆಟ್ಟಿ ಪದೆಂಜಿಲ ಅವರು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಿ ಅವರಿಗೆ ನಮನ ಸಲ್ಲಿಸಿದರು.

ಇನ್ನೋರ್ವ ಅತಿಥಿ ಹಾಗೂ ಸ್ಥಳೀಯ ಮುಖಂಡರಾದ ಕೋಟ್ಯಪ್ಪ ಪೂಜಾರಿ ಕುಕ್ಕಳ ಅವರು ಮಾತನಾಡಿ, ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಮಕ್ಕಳ ಪೋಷಕರ ಪರವಾಗಿ ಮಾತನಾಡಿದ ಮಹೀಂದ್ರಾ ಜೈನ್ ಅವರು ಮಕ್ಕಳ ಆರೋಗ್ಯದ ಕಾಳಜಿಯ ಕುರಿತು ಮಾತನಾಡಿ, ಶುಭ ಹಾರೈಸಿದರು.

ಮಡಂತ್ಯಾರ್ ಹಾ.ಊ.ಸ. ಸಂಘದ ಮಾಜಿ ನಿರ್ದೇಶಕರಾದ ಶ್ರೀಮತಿ ಸೌಮ್ಯ ಹಲೆಕ್ಕಿ, ಸ್ಥಳೀಯ ಪ್ರಮುಖರಾದ ರಾಮಣ್ಣ ಮೂಲ್ಯ ಹಲೆಕ್ಕಿ, ಯಶೋಧರ ಪೂಜಾರಿ, ರಾಜೇಶ್ ಕುಕ್ಕಳ, ಸಂದೇಶ್ ಕುಕ್ಕಳ, ಕೊರಗಪ್ಪ ಆಚಾರ್ಯ ಕುಕ್ಕಳ ಸೇರಿದಂತೆ ಹಲವು ಸ್ಥಳೀಯರು ಹಾಗೂ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಆಶಾ ಕಾರ್ಯಕರ್ತೆ ಉಷಾ ಪಾಟೀಲ್ ಹಾಗೂ ಅಂಗನವಾಡಿ ಸಹಾಯಕಿ ದೀಕ್ಷಿತಾ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಅಂಗನವಾಡಿ ಮುಖ್ಯಸ್ಥೆ ಪುಷ್ಪಾವತಿ ಟೀಚರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ಆಗಮಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಬಳಿಕ ಉಪಸ್ಥಿತರಿದ್ದ ಎಲ್ಲರಿಗೂ ಸಿಹಿ ತಿಂಡಿ ವಿತರಿಸುವ ಮೂಲಕ ಕಾರ್ಯಕ್ರಮವು ಸಂಪನ್ನಗೊಂಡಿತು.

error: Content is protected !!