
ಬೆಳ್ತಂಗಡಿ: ಮುಂಡಾಜೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಲಾಯಿತು.
ಸಂಘದ ಅಧ್ಯಕ್ಷ ವಿಜಯ ಆರ್. ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಒಂಜರೆಬೈಲು ಅಂಗನವಾಡಿ ಕೇಂದ್ರದ ಪುಷ್ಪಾ, ಕೊಟ್ರೊಟ್ಟು ಅಂಗನವಾಡಿ ಕೇಂದ್ರದ ಪುಷ್ಪಾ, ಮಂಜುಶ್ರೀ ನಗರ ಅಂಗನವಾಡಿ ಕೇಂದ್ರದ ವಸಂತಿ ಶೆಟ್ಟಿ, ಚಾಮುಂಡಿನಗರ ಅಂಗನವಾಡಿ ಕೇಂದ್ರದ ಪುಷ್ಪಾ, ಮುಂಡಾಜೆ ಗ್ರಾ.ಪಂ.ನ ಕುಶಾಲಪ್ಪ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಂಡಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ., ಸಂಘದ ಸಂಚಾಲಕ ನಾಮದೇವ ರಾವ್, ಉಪಾಧ್ಯಕ್ಷ ಶಶಿಧರ್ ಠೋಸರ್, ಕಾರ್ಯದರ್ಶಿ ಸಾಂತಪ್ಪ, ಸಂಘದ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು, ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಾಂತಪ್ಪ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಶೀನ ಗೌರವ ವಂದನೆ ಸಲ್ಲಿಸಿದರು.