ಪಡಂಗಡಿ , ಕಾರು ಬೈಕ್ ಡಿಕ್ಕಿ ಮಹಿಳೆ ಸಾವು, ವ್ಯಕ್ತಿ ಗಂಭೀರ:

 

 

 

ಬೆಳ್ತಂಗಡಿ: ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ ಘಟನೆ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪ್ರಗತಿಪರ ಕೃಷಿಕ ಬಳೆಂಜ  ಫಾರ್ಮ್ಸ್ ನ ಅನಿಲ್  ಅವರ ಪತ್ನಿ ಶೈಲಜಾ ಎಂದು ಗುರುತಿಸಲಾಗಿದೆ.  ಪಡಂಗಡಿಯಿಂದ ಬೈಕಿನಲ್ಲಿ ಪತ್ನಿ ಶೈಲಾಜಾ ಹಾಗೂ  ಮಗನೊಂದಿಗೆ  ತೆರಳುತ್ತಿರುವ ವೇಳೆ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಪತ್ನಿ ಸಾವನ್ನಪ್ಪಿದ್ದು, ಅನಿಲ್ ಅವರಿಗೆ ಗಂಭೀರ ಗಾಯಗಳಾಗಿವೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

error: Content is protected !!