ಬೆಳ್ತಂಗಡಿ : ಅಕ್ರಮವಾಗಿ ತೋಟಕ್ಕೆ ಪ್ರವೇಶಿಸಿ ಅಡಿಕೆ ಗಿಡಗಳ ನಾಶಕ್ಕೆ ಯತ್ನ ; ಮಹಿಳೆಯನ್ನು ನಿಂದಿಸಿ 50 ಸಾವಿರ ವಸೂಲಿ ಮಾಡಿದ ವಕೀಲೆ:

 

 

 

ಬೆಳ್ತಂಗಡಿ : ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಡಿಕೆ ಗಿಡಗಳನ್ನು ನಾಶಪಡಿಸಲು ಯತ್ನಿಸಿದನ್ನು ಪ್ರಶ್ನಿಸಿದ್ದಕ್ಕೆ
ಮಾನ ಭಂಗಕ್ಕೆ ಯತ್ನಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬಲ್ಲಿ ಕೇಳಿ ಬಂದಿದೆ.

ದೂರುದಾರ ಮಹಿಳೆಗೆ ಗರ್ಡಾಡಿ ಗ್ರಾಮದಲ್ಲಿ ಗಂಡನ ಹೆಸರಿನಲ್ಲಿ ಜಾಗವಿದ್ದು ಅದಕ್ಕೆ ದಿನಾಂಕ 28-3-2025 ರಂದು ಆ ಜಾಗಕ್ಕೆ ಚೇತನಾ, ಅವರ ಸಹೋದರ ಮತ್ತು ಸಹೋದರ, ತಂದೆ ಹಾಗೂ ತಾರನಾಥ ಎಂಬವರು ಅಕ್ರಮವಾಗಿ ಪ್ರವೇಶಿಸಿದ್ದು ಅಡಿಕೆ ಕೃಷಿಯನ್ನು ನಾಶಪಡಿಸಿಲು ಯತ್ನಿಸಿದ್ದಾರೆ. ಈ ವೇಳೆ ಸುಮಾ ಅವರು ಆಕ್ಷೇಪಿಸಿದ್ದು, ಈ ಸಮಯ ಚೇತಾನಾಳ ಸಹೋದರ ಮತ್ತು ತಂದೆ ಮಾನ ಭಂಗ ಮಾಡಲು ಪ್ರಯತ್ನಿಸಿದ್ದು ಬಳಿಕೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೇ ನೀನು ದೂರು ಕೊಟ್ಟರೆ ನಿನ್ನ ಹಾಗೂ ನಿನ್ನ ಮಗನನ್ನು ಜೀವ ಸಹಿತ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಭಯಭೀತರಾಗಿ ಮಹಿಳೆ ಅವರು ಯಾವುದೇ ದೂರು ನೀಡಿಲ್ಲ. ಆದರೆ ದಿನಾಂಕ: 01.04.2026 ರಂದು ಅವರ ವಿರುದ್ಧ ನೀಡಿರುವ ದೂರಿನ ವಿಚಾರಣೆಗೆ ಠಾಣೆಗೆ ಬಂದಾಗ ದೂರುದಾರರ ಪರ ವಕೀಲರಾದ ಟಿಸ್ಮಿ ಅವರು ನೊಂದ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ದೂರುದಾರರಿಗೆ 50 ಸಾವಿರ ಮಹಿಳೆ ನೀಡುವಂತೆ ತಾಕೀತು ಮಾಡಿದ್ದಾರಂತೆ. ಜೊತೆಯಲ್ಲಿದ್ದ ಶಿವಾನಂದರವರು ಹಣದ ವಿಚಾರವನ್ನು ವಕೀಲೆಯ ಕಚೇರಿಯಲ್ಲಿ ನೋಡಿಕೊಳ್ಳಿ ಎಂದು ಹೇಳಿದರಿಂದ ಮಹಿಳೆ ಅವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕರಿಮಣಿ ಸರವನ್ನು ಅಡವಿಟ್ಟು ಟಿಸ್ಮಿ ವಕೀಲೆಗೆ 50 ಸಾವಿರ ನೀಡಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಏ.1 ರಂದು ದೂರು ನೀಡಿದ್ದು ಅದರಂತೆ BNS-2023 (u/s-76,329(3),115(2),351,r/w3(5)) ಅಡಿಯಲ್ಲಿ ಐದು ಜನ ಆರೋಪಿಗಳಾದ ಚೇತನಾ, ಚೇತನಾ ಸಹೋದರ, ತಾರಾನಾಥ್ ಶೆಟ್ಟಿ, ಚೇತನಾ ತಂದೆ, ವಕೀಲೆ ಟಿಸ್ಮಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.

error: Content is protected !!