
ಬೆಳ್ತಂಗಡಿ: ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳ ಸೇವಾ ಯೋಜನೆಗಳಲ್ಲಿ ಗುರುತಿಸಿಕೊಂಡಿರುವ ಅಶಕ್ತ ಬಡ ಕುಟುಂಬಗಳ ಪಾಲಿನ ಆಶಾ ಕಿರಣ, ಕಲಾಪೋಷಕ ಕೊಡುಗೈ ದಾನಿ ಶಶಿಧರ್ ಶೆಟ್ಟಿಯವರು ಸೇವಾ ರೂಪದಲ್ಲಿ ನವೀಕರಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿವಾರ ದೇವತೆ ರಕ್ತೇಶ್ವರಿ ಗುಡಿಯಲ್ಲಿ ಎ02 ಗುರುವಾರ ಶ್ರೀ ದೇವರ ಪುನರ್ ಪ್ರತಿಷ್ಠೆ ಹಾಗೂ ಅಷ್ಟೋತ್ತರ ಶತಕಲಶಾಭಿಷೇಕ ಕಾರ್ಯಕ್ರಮವು ವಿಶೇಷ ರೀತಿಯಲ್ಲಿ ನಡೆಯಿತು. ಬುಧವಾರ ಸಂಜೆಯಿಂದ ವಿವಿಧ ಧಾರ್ಮಿಕ ವಿದಿವಿಧಾನಗಳು ಕಟೀಲು ಕ್ಷೇತ್ರದ ಆಸ್ರಣ್ಣರು ನೆರವೇರಿಸಿ ಗುರುವಾರ ಪುನರ್ ಪ್ರತಿಷ್ಠೆ, ಅಷ್ಟೋತ್ತರ ಶತಕಲಶಾಭಿಷೇಕ ನಡೆಯಿತು. ಎಂ.ಆರ್.ಜಿ ಗ್ರೂಪಿನ ಅಧ್ಯಕ್ಷ ಪ್ರಕಾಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲಿ ಸ್ವಾಮೀಜಿಗಳು ಭಾಗವಹಿಸಿ ಶಶಿಧರ್ ಶೆಟ್ಟಿ ದಂಪತಿಗಳ ಸೇವಾ ಕಾರ್ಯಗಳನ್ನು ಶ್ಲಾಘಿಸಿದರಲ್ಲದೆ,ಅವರು ಮಾಡಿದ ಮಹತ್ಕಾರ್ಯವನ್ನು ತಾಯಿ ಪ್ರಸನ್ನಚಿತ್ತಳಾಗಿ ಸ್ಚೀಕರಿಸಿದ್ದಾಳೆ ಅದಕ್ಕೆ ಸಾಕ್ಷಿ ಇಲ್ಲಿ ಸೇರಿರುವ ಬೃಹತ್ ಸಂಖ್ಯೆಯ ಭಕ್ತಗಡಾಣ , ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿಯನ್ನು ಕಟೀಲು ತಾಯಿ ಅವರಿಗೆ ಕರುಣಿಸಲಿ ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಸೇರಿದಂತೆ, ವಿವಿಧ ಗಣ್ಯರು ಭಾಗವಹಿಸಿದರು. ಈ ಪುಣ್ಯ ಕಾರ್ಯದಲ್ಲಿ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದರು. ಅತ್ಯದ್ಭುತ ರೀತಿಯಲ್ಲಿ ರಕ್ತೇಶ್ವರಿ ಗುಡಿ ಹಾಗೂ ಸುತ್ತ ಮುತ್ತ,ಸುತ್ತುಪೌಳಿ, ಪ್ರಾಂಗಣದ ಕೆತ್ತನೆ ಕೆಲಸಗಳು ಎಲ್ಲರ ಮೆಚ್ಚುಗೆ ಪಾತ್ರವಾಯಿತಲ್ಲದೇ ಶಶಿಧರ್ ಶೆಟ್ಟಿಯವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಸಾದ ರೂಪವಾಗಿ ಸೀರೆ ವಿತರಣೆ ಕಾರ್ಯಕ್ರಮವನ್ನು ಶಶಿಧರ್ ಶೆಟ್ಟಿ ದಂಪತಿಗಳು ಹಾಗೂ ನವಶಕ್ತಿ ಕುಟುಂಬಸ್ಥರು ನೆರವೇರಿಸಿದರು. ಸುಮಾರು 15,000 ಮಂದಿ ಭಕ್ತರಿಗೆ ಸೀರೆ ವಿತರಣೆ ಈ ಸಂದರ್ಭದಲ್ಲಿ ನಡೆಯಿತು.