
ಬೆಳ್ತಂಗಡಿ:ಕರ್ನಾಟಕ ಗೋಜು- ರಿಯು ಕರಾಟೆ- ಡೊ ಫೆಡರೇಶನ್ ವತಿಯಿಂದ ಬೆಂಗಳೂರಿನಲ್ಲಿ ಮಾ 29ರಂದು ನಡೆದ 12-13ವಯೋಮಾನದ ಬಾಲಕಿಯರ ಕಟ ವಿಭಾಗದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾನ್ವಿ ಎಸ್ ಕೋಟ್ಯಾನ್ ಬಳಂಜ ತೃತೀಯ ಸ್ಥಾನದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನೆಲ್ಯಾಡಿ ಜ್ಞಾನೋದಯಾ ಬೆಥನಿ ಪಿಯು ಕಾಲೇಜಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರಿಗೆ ಅಲ್ಪೋನ್ಸ ಅವರು ಕರಾಟೆ ತರಬೇತು ನೀಡುತ್ತಿದ್ದಾರೆ.ಇವರು ನಾಲ್ಕೂರು ಗ್ರಾಮದ ಪುಣ್ಕೆದೋಟ್ಟು ಮನೆಯ ಸೌಮ್ಯ ಮತ್ತು ಯಶವಂತ್ ನೆಲ್ಯಾಡಿ ದಂಪತಿ ಸುಪುತ್ರಿ.