
ಬೆಳ್ತಂಗಡಿ:ಮಹಾತ್ಮಾ ಗಾಂಧಿ ನಡ ಗ್ರಾಮ ಪಂಚಾಯತ್ 2026 -27 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಅ 03 ರಂದು ನಡೆಯಿತು. ಈ ವೇಳೆ ಸಭೆಯ ಪ್ರಾರಂಭದಲ್ಲೆ ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಗ್ರಾಮಸ್ಥರ ಅಸಾಮಾಧಾನಕ್ಕೆ ಕಾರಣವಾಯಿತು. ಅಧಿಕಾರಿಗಳು ಬಾರದಿದ್ದರೆ ಗ್ರಾಮ ಸಭೆ ನಡೆಸುವ ಅಗತ್ಯತೆ ಏನಿದೆ. ಗ್ರಾಮ ಸಭೆಯಲ್ಲಿ ನಡೆಯುವ ಚರ್ಚೆಗಳಿಗೆ ಉತ್ತರಿಸುವವರು ಯಾರು . ಗ್ರಾಮಸ್ಥರು ಕೆಲವೊಂದು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಉದ್ಧೇಶದಿಂದ ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಸಭೆಯಲ್ಲಿ ಭಾಗವಹಿಸಿದರೂ ಅಧಿಕಾರಿಗಳು ಬಾರದಿದ್ದರೆ ಸಮಸ್ಯೆಯ ಬಗ್ಗೆ ಯಾರಲ್ಲಿ ಚರ್ಚಿಸಬೇಕು . ರಸ್ತೆ ಬದಿ ಚರಂಡಿ ದುರಸ್ತಿಗೊಳ್ಳದೇ ರಸ್ತೆಯಲ್ಲಿ ನೀರು ಹೋಗುತಿದ್ದು ಅನೇಕ ಅನಾಹುತ ಸಂಭವಿಸುತ್ತಿವೆ. ಪಿಡಬ್ಲ್ಯುಡಿ ಅಧಿಕಾರಿಗಳು ಎಲ್ಲಿ, ಎಂದು ಪ್ರಶ್ನಿಸಿದ ಗ್ರಾಮಸ್ಥರು ಅಧಿಕಾರಿಳನ್ನು ಸಭೆಗೆ ಕರೆಸಿ ಎಂದು ಪಟ್ಟು ಹಿಡಿದರು.ಈ ವೇಳೆ ಅಧಿಕಾರಿಗಳು ಬರುವ ಬಗ್ಗೆ ತಿಳಿಸಿರುವುದಾಗಿ ಪಿಡಿಒ ತಿಳಿಸಿದರು.