ಅಭ್ಯಾಸ್ ಪಿಯು ಕಾಲೇಜಿನ ಅನಧಿಕೃತ ಕಟ್ಟಡ ಕಾಮಗಾರಿ: ಎಚ್ಚರಿಕೆ ಫಲಕ ಅಳವಡಿಸಿದ ಲಾಯಿಲ ಗ್ರಾಮ ಪಂಚಾಯತ್:

 

 

 

 

ಬೆಳ್ತಂಗಡಿ : ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಶಿಬೆಟ್ಟು ಎಂಬಲ್ಲಿ ‘ಅಭ್ಯಾಸ್ ಪ್ರೀ ಯುನಿವರ್ಸಿಟಿ ಕಾಲೇಜು ಅನಧಿಕೃತ ಕಟ್ಟಡ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ದೂರು ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್, ಕಾರ್ಯನಿರ್ವಹಣಾಧಿಕಾರಿ, ಹಾಗೂ ಲಾಯಿಲ ಗ್ರಾಮ ಪಂಚಾಯತ್ ಪಿಡಿಒ ಶ್ರೀನಿವಾಸ್ ಡಿ.ಪಿ. ಸೇರಿದಂತೆ ಅಧಿಕಾರಿಗಳ ತಂಡ ಜ 05 ರಂದು ಸ್ಥಳಕ್ಕೆ ತೆರಳಿ  ಪರಿಶೀಲಿಸಿ ಎಸ್ ಟಿ.ಪಿ ರಚನೆ ವರದಿ ಹಾಗೂ  ಕಾಲೇಜು ಬಳಿ ನಡೆಯುತ್ತಿರುವ  ಕಾಮಗಾರಿ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟವರಿಗೆ ನೋಟೀಸ್ ನೀಡಿದ್ದು , ಅದರಂತೆ ಜ 08 ರಂದು ಪಂಚಾಯತ್ ಆಧಿಕಾರಿಗಳು ಕಾಮಗಾರಿ ನಿರ್ಬಂಧಿಸಿ ಎಚ್ಚರಿಕೆಯ ಫಲಕ ಅಳವಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿ ಇರುವ ಸರ್ವೆ ನಂಬರ್ 205/44,45,46 ರಲ್ಲಿ ಕಾರ್ತಿಕೇಯ ಎಂಬವರ ಮಾಲೀಕತ್ವದ ‘ಅಭ್ಯಾಸ್ ಪ್ರೀ ಯುನಿವರ್ಸಿಟಿ ಕಾಲೇಜ್’ ನಲ್ಲಿ ಸಕ್ಷಮ ಪ್ರಾಧಿಕಾರದಿಂದ ಎಚ್ಚರಿಕೆ ಟೇಪ್ ಅಳವಡಿಸಿ ಕಾಮಗಾರಿ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಿ ಸ್ಥಗಿತಗೊಳಿಸಲಾಗಿದೆ.ಇದನ್ನು ಉಲ್ಲಂಘಿಸಿ ಕಾಮಗಾರಿಯನ್ನು ಪುನರ್ ಆರಂಭಿಸಿದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕಾರ ಹಾಗೂ ಅಕ್ರಮ ಕಟ್ಟಡಗಳನ್ನು ನಿರ್ಬಂಧಿಸುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ಮತ್ತು ಕರ್ನಾಟಕ ಸರಕಾರ ಸುತ್ತೋಲೆ ಸಂಖ್ಯೆ ಆರ್.ಡಿ.ಪಿ.ಆರ್ /27/ಜಿಪಿಎ 2025 ದಿನಾಂಕ 05-01-2025 ರಂತೆ ಕಾನೂನು ಕ್ರಮವನ್ನು ಸಂಬಂಧಪಟ್ಟರವರ ಮೇಲೆ ಜರುಗಿಸಲಾಗುವುದು ಎಂಬ ಜ.8 ರಂದು ಅಕ್ರಮ ಎಚ್ಚರಿಕೆಯ ಸೂಚನ ಫಲಕ ಅಳವಡಿಸಿದ್ದಾರೆ.

error: Content is protected !!