ಪುಂಜಾಲಕಟ್ಟೆ – ಪುರಿಯ ರಸ್ತೆ ನಿರ್ಮಾಣಕ್ಕೆ ₹ 50ಲಕ್ಷ ಅನುದಾನ ಮಂಜೂರು: ಹರೀಶ್ ಪೂಂಜ

 

 

 

ಬೆಳ್ತಂಗಡಿ:: ಕುಕ್ಕಳ ಮತ್ತು ಮಾಲಾಡಿ ಗ್ರಾಮದ ಗ್ರಾಮಸ್ಥರ ಬಹುಬೇಡಿಕೆಯ ಸಂಪರ್ಕ ರಸ್ತೆಯಾದ ಪುಂಜಾಲಕಟ್ಟೆ – ಪುರಿಯ ರಸ್ತೆ ನಿರ್ಮಾಣಕ್ಕೆ ಈ ಹಿಂದೆ ಸೂಕ್ತ ಪ್ರಸ್ತಾವನೆಯನ್ನು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಅದರಂತೆ, ಸರಕಾರದಿಂದ ರೂ.50.00 ಲಕ್ಷ ಮೊತ್ತಕ್ಕೆ ಅನುಮೋದನೆ ದೊರಕಿದ್ದು ಸದ್ರಿ ಕಾಮಗಾರಿಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಆದೇಶವಾಗಿರುತ್ತದೆ. ಹಾಗಾಗಿ, ಆ ಭಾಗದ ಸಾರ್ವಜನಿಕರ ಉಪಯೋಗಕ್ಕೆ ಆದ್ಯತೆಯ ಈ ಕಾಮಗಾರಿಗೆ ರೂ.50.00ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಶಾಸಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

error: Content is protected !!