
ಬೆಳ್ತಂಗಡಿ: ಕಳೆದ ಕೆಲವು ತಿಂಗಳುಗಳ ಹಿಂದೆ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಸಮೀಪ ಕರ್ತವ್ಯ ನಿರ್ವಹಿಸುತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದ ಬೆಳ್ತಂಗಡಿ ಮೆಸ್ಕಾಂ ಶಾಖೆಯ ಪವರ್ ಮ್ಯಾನ್ ವಿಜೇಶ್ ಅವರ ಕುಟುಂಬಕ್ಕೆ ಮೆಸ್ಕಾಂ ಇಲಾಖೆಯ ವೈಯಕ್ತಿಕ ಅಪಘಾತದ ವಿಮಾ ಯೋಜನೆಯಡಿ ₹ 1 ಕೋಟಿ ಮೊತ್ತದ ಚೆಕ್ ನ್ನು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮೃತ ಪವರ್ ಮ್ಯಾನ್ ಅವರ ತಾಯಿ ಪೂರ್ಣಿಮಾ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಅಧಿಕಾರಿಗಳು ಉಪಸ್ಥಿತರಿದ್ದರು.