
ಬಳಂಜ: ಸರಕಾರಿ ಉನ್ನತೀಕರಿಸಿದ ಉಪ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಳಂಜಿ ಇಲ್ಲಿ ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ, ಉದ್ಯಮಿ ಶೇಖರ್ ದೇವಾಡಿಗ ಇವರ ಸಹಕಾರದೊಂದಿಗೆ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗಾಗಿ ಚಿಣ್ಣರ ಅಂಗಳಕ್ಕೆ ಶಿಲಾನ್ಯಾಸವನ್ನು ದೀಪ್ತಿ ಶೇಖರ್ ದೇವಾಡಿಗ ಪಾಲಬೆ ಜ 5ರಂದು ನೇರವೇರಿಸಿ ಶುಭಕೋರಿದರು.
ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ಕೃಷ್ಟ ಮಟ್ಟದ ಶಿಕ್ಷಣ ಸಿಗಬೇಕೆಂಬುದು ಶಿಕ್ಷಣ ಟ್ರಸ್ಟ್ ನ ಉದ್ದೆಶವಾಗಿದೆ. ಇಗಾಗಲೇ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗಿದೆ.ಮುಂದೆ ಇನ್ನಷ್ಟು ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದರು.
ಬಳಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರ್ಚಕ ಮಂಜುನಾಥ ಭಟ್ ವೈದಿಕ ವಿಧಿ ವಿದಾನ ನೇರವೇರಿಸಿದರು.
ಈ ಸಂದರ್ಭದಲ್ಲಿ ಬಳಂಜ ಗ್ರಾ.ಪಂ ಅಧ್ಯಕ್ಷೆ ಶೋಭಾ ಕುಲಾಲ್,ಪಿಡಿಓ ಶಶಿಕಲಾ,ಬಳಂಜ ಶಾಲಾ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ,ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ,ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನರಾಜ್ ಜೈನ್,ಟ್ರಸ್ಟಿಗಳಾದ ಸಂತೋಷ್ ಕುಮಾರ್ ಕಾಪಿನಡ್ಕ,ವಿನು ಬಳಂಜ,ರಾಕೇಶ್ ಹೆಗ್ಡೆ,ಪ್ರವೀಣ್ ಕುಮಾರ್ ಹೆಚ್.ಎಸ್,ಪ್ರಮೋದ್ ಕುಮಾರ್ ಹೊಸಮನೆ,ಬಳಂಜ ಗ್ರಾ.ಪಂ ಸದಸ್ಯರುಗಳಾದ ಯಕ್ಷಿತಾ ದೇವಾಡಿಗ,ಲೀಲಾವತಿ,ಬೇಬಿ ನಾರಾಯಣ,ರವೀಂದ್ರ ಬಿ ಅಮೀನ್,ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಚೇತನಾ ಜೈನ್,ಉಮಾಮಹೇಶ್ವರ ಯುವಕ ಮಂಡಲ ಅಧ್ಯಕ್ಷ ಸುಕೇಶ್ ಜೈನ್,ರಮಾನಾಥ ಶೆಟ್ಟಿ,ಪುರಂದರ ಪೂಜಾರಿ,ಪ್ರವೀಣ್ ಪೂಜಾರಿ,ಗಣೇಶ್ ದೇವಾಡಿಗ, ಶಿಕ್ಷಕಿಯರಾದ ಹೇಮಾ,ಕೀರ್ತಿ,ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ಪದ್ಮಾವತಿ, ಸೇವಾನಿರತರಾದ ಪ್ರಮಿಳಾ, ಉಮಾವತಿ ಹಾಗೂ ಇತರರು ಉಪಸ್ಥಿತರಿದ್ದರು.
ಬಳಂಜ ಶಾಲಾ ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ,ವಂದಿಸಿದರು.
ಇದನ್ನೂ ಓದಿ: