ಶಿಶಿಲ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಪತ್ರ ವೈರಲ್: ಯಾವುದೇ ಆಧಿಕೃತ ಪತ್ರ  ಬಂದಿಲ್ಲ, ಪ್ರಜಾಪ್ರಕಾಶ ನ್ಯೂಸ್ ಗೆ ಲೋಕೋಪಯೋಗಿ ಎಇಇ   ಮಾಹಿತಿ:

 

 

ಬೆಳ್ತಂಗಡಿ: ತಾಲೂಕಿನ ಪ್ರಸಿದ್ದ ಪುಣ್ಯಕ್ಷೇತ್ರ ಮತ್ಸ್ಯ ತೀರ್ಥ ಶಿಶಿಲೇಶ್ವರ ದೇವಸ್ಥಾನಕ್ಕೆ ಹೋಗುವ ಕಪಿಲ ನದಿಗೆ ಸೇತುವೆ ನಿರ್ಮಾಣಕ್ಕಾಗಿ ₹ 2.75 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂಬ ಪತ್ರವೊಂದು ಮಂಗಳವಾರ ಸಂಜೆಯಿಂದ ಸಾಮಾಜಿಕ ಜಾಲ ತಾಣ ಹಾಗೂ  ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಕುತೂಹಲ ಮೂಡಿಸಿದೆ. ಈ ಪತ್ರದ  ಬಗ್ಗೆ ಪ್ರಜಾಪ್ರಕಾಶ ನ್ಯೂಸ್  ಬೆಳ್ತಂಗಡಿ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಎಚ್ ಬಕ್ಕಪ್ಪ  ಅವರಲ್ಲಿ ಮಾಹಿತಿ ಕೇಳಿದಾಗ ಯಾವುದೇ ರೀತಿಯ ಅಧಿಕೃತ ಪತ್ರ ಇನ್ನು ಬಂದಿಲ್ಲ ಈ ಪತ್ರದ ಬಗ್ಗೆ ಮಾಹಿತಿ ಇಲ್ಲ ಎಂಬ ಉತ್ತರವನ್ನು ಅವರು ನೀಡಿದ್ದಾರೆ.₹2.75 ಕೋಟಿ ಅನುದಾನದಲ್ಲಿ  ಕಾಲು ಸಂಕ ನಿರ್ಮಿಸಬಹುದಷ್ಟೆ ಎಂದರಲ್ಲದೆ,ಈಗಾಗಲೇ ₹ 5ಕೋಟಿಯ ಎಸ್ಟಿಮೇಟ್ ನ ವರದಿಯನ್ನು ನಾನು ಸಿದ್ಧಪಡಿಸಿ ಕಳುಹಿಸಿದ್ದು,  ಹಿಂದೆ ಇಂಜಿನಿಯರ್ ಆಗಿದ್ದ  ಶಿವಪ್ರಸಾದ್ ಅಜಿಲ ಅವರು ಶಾಸಕರ ಸೂಚನೆಯಂತೆ  ಎಸ್ಟಿಮೇಟ್  ಮಾಡಿ ಕಳುಹಿಸಿರುವ ಬಗ್ಗೆ ಮಾಹಿತಿಯೂ ಇದೆ.  ಇನ್ನೊಂದು ಎಸ್ಟಿಮೇಟ್ ಸಿದ್ಧಪಡಿಸಿ ಮತ್ತೊಮ್ಮ ಕಳುಹಿಸಿಕೊಡಲಾಗುವುದು ಎಂಬ ಬಗ್ಗೆಯೂ ತಿಳಿಸಿದ್ದಾರೆ.

 

ಸೋಶಿಯಲ್ ಮೀಡಿಯಗಳಲ್ಲಿ ಶಿಶಿಲೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ಸೇತುವೆಗೆ ₹2.75 ಕೋಟಿ ಅನುದಾನ ಬಿಡುಗಡೆಯಾಗಿದೆ. ಎಂಬ ಪತ್ರವೊಂದು ಹರಿದಾಡುತ್ತಿರುವ ಬಗ್ಗೆ ಸ್ಥಳೀಯರಲ್ಲೂ ಸಂಶಯ ಮೂಡಿಸಿದೆ. ಅನುದಾನ ಬಿಡುಗಡೆಯಾಗಿದೆ ಎನ್ನುವ ಪತ್ರದಲ್ಲಿ ಉಲ್ಲೇಖಿಸಿದ ಮೊತ್ತದಲ್ಲಿ ಸೇತುವೆ ನಿರ್ಮಾಣವಾಗುತ್ತದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಸರ್ಕಾರದ ಯಾವುದೇ ಅಧಿಕೃತ ಅನುದಾನ ಬಿಡುಗಡೆಯಾದ ಮಾಹಿತಿಯ ಅಧಿಕೃತ ಅದೇಶದ ಪ್ರತಿ ಸಂಬಂಧಿಸಿದ ಇಲಾಖೆಗಳಿಗೆ ತಲುಪದಿರುವುದು ಕೆಲವೊಂದು ಸಂಶಯಗಳಿಗೆ ಕಾರಣವಾಗಿದೆ.
ಈ ಬಗ್ಗೆ ಶಿಶಿಲ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಶಾಸಕ ಹರೀಶ್ ಪೂಂಜ ಅವರಲ್ಲಿ ಪ್ರಶ್ನಿಸಿದಾಗ ಅವರು ಕೂಡ ಅನುದಾನ ಬಿಡುಗಡೆ ಆಗಿರುವ ಬಗ್ಗೆ ಈ ಸಮಯದವರೆಗೆ ಗೊತ್ತಿಲ್ಲ ಎಂಬ ಉತ್ತರವನ್ನು ನೀಡಿದರಲ್ಲದೇ ಈ ಸೇತುವೆ ನಿರ್ಮಾಣಕ್ಕಾಗಿ ₹10 ಕೋಟಿ ಅನುದಾನ ನೀಡುವಂತೆ ಈಗಾಗಲೇ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ವೈರಲ್ ಆಗುತ್ತಿರುವ ವರದಿಯಲ್ಲಿರುವ ಮೊತ್ತದಲ್ಲಿ ಆ ನದಿಗೆ ಕಾಲುಸಂಕ ನಿರ್ಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.ಒಟ್ಟಾರೆಯಾಗಿ ಹರಿದಾಡುತ್ತಿರುವ ಪತ್ರ ಅಧಿಕೃತವೋ ಅಥವಾ ರಾಜಕೀಯ ಪ್ರೇರಿತವೋ ಎಂಬ ಪ್ರಶ್ನೆಗೆ ಉತ್ತರ ಸಾರ್ವಜನಿಕರಿಗೆ ದೊರೆಯಬೇಕಾಗಿದೆ.

error: Content is protected !!