
ಬೆಳ್ತಂಗಡಿ: ಹೂವಿನಲ್ಲಿ ಬೃಹದಾಕಾರದ ರಂಗೋಲಿಯನ್ನು ತಯಾರಿಸಿ ದಾಖಲೆ ನಿರ್ಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ಶ್ರದ್ಧಾ ಶೆಟ್ಟಿ ಎಣಿoಜೆ ರವರನ್ನು ಸಂಸದ್ ಕ್ರೀಡಾ ಮಹೋತ್ಸವದ ಕಾರ್ಯಕ್ರಮದ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಜಿಲ್ಲೆಯ ಶಾಸಕರ, ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಪ್ರಧಾನ ಮಂತ್ರಿಗಳೊಂದಿಗೆ ಮೊದಲ ಭೇಟಿಯಲ್ಲಿ ತಾವು ತೆಗೆಸಿಕೊಂಡಿದ್ದ ನಲ್ಮೆಯ ಭಾವಚಿತ್ರದ ಈ ಒಂದು ಕ್ಷಣವನ್ನು ಅವಿಸ್ಮರಣೀಯ ನೆನಪಿಗೋಸ್ಕರ ಶ್ರದ್ಧಾ ಶೆಟ್ಟಿ ತಮ್ಮ ಕೈಚಳಕದಲ್ಲಿ ಬಿಡಿಸಿದ ಚಿತ್ರವನ್ನು ಸಂಸದರಿಗೆ ನೀಡಿದರು.