
ಬೆಳ್ತಂಗಡಿ:ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ನಂಬ್ರ 117 ರಲ್ಲಿ ಇನ್ಫಿನಿಟಿ ಫೌಂಡೇಶನ್ ಇದರ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಕಟ್ಟಡ ರಚನೆ ಕಾಮಗಾರಿಯನ್ನು ಡಿ 27 ರಂದು ಗ್ರಾ.ಪಂ ಪಿಡಿಒ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರ ತಂಡ ಪೊಲೀಸರ ಸಹಕಾರದಲ್ಲಿ ಕಾಮಗಾರಿ ನಿರ್ಬಂಧಿಸಿ ಬ್ಯಾನರ್ ಅಳವಡಿಸಿ ಸ್ಥಗಿತಗೊಳಿಸಲಾಗಿದೆ. ಗುರುವಾಯನಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ಕಾಲೇಜೊಂದರ ಕಟ್ಟಡ ನಿರ್ಮಾಣವಾಗುತಿದ್ದು, ಈ ಕಟ್ಟಡ ಅಕ್ರಮವಾಗಿ ನಿರ್ಮಿಸಲಾಗುತ್ತಿದೆ ಎಂಬ ಬಗ್ಗೆ ಡಿ23 ರಂದು ಶಾಸಕ ಹರೀಶ್ ಪೂಂಜ ಅಧ್ಯಕ್ಪತೆಯಲ್ಲಿ ನಡೆದ ಕುವೆಟ್ಟು ಗ್ರಾಮ ಮಟ್ಟದ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು. ಕಟ್ಟಡದ ಕಾಮಗಾರಿ ತಕ್ಷಣ ನಿಲ್ಲಿಸುವಂತೆ ಶಾಸಕರು ಸೂಚಿಸಿದ ಬೆನ್ನಲ್ಲೆ , ತಾ.ಪಂ ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್ ಪಿಡಿಒ ಸೇರಿದಂತೆ ಪೊಲ ಅಧಿಕಾರಿಗಳು ಡಿ 27 ರಂದು ಸ್ಥಳಕ್ಕೆ ತೆರಳಿ ಕಾಮಗಾರಿ ನಿಷೇಧಿಸಿ ಎಚ್ಚರಿಕೆ ಫಲಕವನ್ನು ಅಳವಡಿಸಿದ್ದಾರೆ.