
ಬೆಳ್ತಂಗಡಿ: ಲಾಯಿಲದಿಂದ ಬೆಳ್ತಂಗಡಿ ನಗರ ಸಂಪರ್ಕಿಸುವ ನಾಗರಿಕರ ಬಹು ವರ್ಷಗಳ ಬೇಡಿಕೆಯಾದ ಮಠದಬೈಲು ಎಂಬಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಡಿ.26 ರಂದು ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.
ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ಕನ್ನಾಜೆ ಕಾಲು ಸಂಕ ನಿರ್ಮಾಣಗೊಳ್ಳಲಿದ್ದು ಕಾಯಿಲೆ, ಮೇಲಂತಬೆಟ್ಟು, ಸವಣಾಲು ಸೇರಿದಂತೆ ಹಲವು ಗ್ರಾಮಗಳನ್ನು ಬೆಸೆಯಲಿದೆ. ಈ ಯೋಜನೆ ಕುರಿತು ಜನರ ಬಹು ವರ್ಷಗಳ ಬೇಡಿಕೆಯಾಗಿದೆ. ಇಲಾಖೆ ಮಧ್ಯೆ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟರು ಮಾಜಿ ಸಿಎಂ ಯಡಿಯೂರಪ್ಪನವರು. ಅಭಿವೃದ್ಧಿಗೆ ಸರ್ಕಾರ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ ಎಂದು ಹೇಳಿದರು.
ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್,
ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ, ಪ್ರಮುಖರಾದ ಈಶ್ವರ ಬೈರ, ಯೋಗೀಶ್ ಬಿಢೆ,ದಯಾನಂದ ಶೆಟ್ಟಿ ಕನ್ನಾಜೆ ,ಗಣೇಶ್ ಸಪಲ್ಯ, ರುಕ್ಮಯ ಕನ್ನಾಜೆ, ಸುಧಾಕರ್ ಬಿ.ಎಲ್. ಸೇರಿದಂತೆ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.ಗಿರೀಶ್ ಡೋಂಗ್ರೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ಆರ್ ಧನ್ಯವಾದವಿತ್ತರು.