ಅಳದಂಗಡಿ, ಶಾಲಾ ವಾರ್ಷಿಕೋತ್ಸವ, ಧಾರ್ಮಿಕ ಭಾವನೆಗಳಿಗೆ ದಕ್ಕೆ ಆರೋಪ: ಧರ್ಮಗುರುಗಳು, ಮುಖಂಡರುಗಳ ಶಾಂತಿ ಸಭೆ, ಗೊಂದಲಕ್ಕೆ  ತೆರೆ:

 

 

ಬೆಳ್ತಂಗಡಿ:ಶಾಲಾ ವಾರ್ಷಿಕೋತ್ಸವದ ವೇಳೆ ಸಮುದಾಯುವೊಂದರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ  ಧರ್ಮಗುರುಗಳು, ಮುಖಂಡರುಗಳ ಉಪಸ್ಥಿತಿಯಲ್ಲಿ ನಡೆದ  ಶಾಂತಿ ಸಭೆಯಲ್ಲಿ ಗೊಂದಲಕ್ಕೆ ತೆರೆ ಎಳೆದ ಘಟನೆ ಆಳದಂಗಡಿಯಲ್ಲಿ ಡಿ 12 ರಂದು ನಡೆದಿದೆ.

 

ಘಟನೆಯ ವಿವರ:

 

ಅಳದಂಗಡಿ ಸೈಂಟ್ ಪೀಟರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಡಿ10 ರಂದು  ಶಾಲಾ ವಾರ್ಷಿಕೋತ್ಸವದ ವೇಳೆ   ವಿಧ್ಯಾರ್ಥಿಗಳು ಪ್ರಸ್ತುತ ಪಡಿಸಿದ ಆರ್ಮಿ‌ -ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕಾಶ್ಮೀರದಲ್ಲಿ ಎ 22 ರಂದು ನಡೆದ ಪಹಲ್ಗಾಂವ್ ಟೆರರಿಸ್ಟ್ ದಾಳಿ ಹಾಗೂ ಮೇ 05 ರಂದು ಸಿಂಧೂರ್ ಅಪರೇಶನ್ 6 ನಿಮಿಷಗಳ ಒಂದು ನೃತ್ಯ ರೂಪಕವನ್ನು ಯೂಟ್ಯೂಬ್ ವಿಡಿಯೋವೊಂದರಲ್ಲಿ ಇದ್ದ ಹಾಗೇ ನಕಲಿ ಮಾಡಿ, ಅದೇ ನೃತ್ಯ, ಸಂಭಾಷಣೆ, ಸಂಗೀತ ಹಾಗೂ ವೇಷಭೂಷಣ ಇತ್ಯಾದಿ ಬದಾಲಾವಣೆ ಮಾಡದೆ ಸದರಿ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು. ಇದರಲ್ಲಿ ಯಾವುದೇ ಧರ್ಮದ ಅವಹೇಳನ ಮಾಡುವ ದುರುದ್ದೇಶವಿರಲಿಲ್ಲ. ಮುಸ್ಲಿಂ ಧರ್ಮದ ಟೋಪಿ ಹಾಗೂ ಶಾಲುಗಳನ್ನು ಧರಿಸಿ ಮುಸ್ಲಿಮರನ್ನು ಭಯೋತ್ಪಧಕರಂತೆ ಬಿಂಬಿಸಲಾಗಿದೆ ಎಂದು ಈ ಕಾರ್ಯಕ್ರಮವನ್ನು ವೀಕ್ಷಿಸಿದ ಶಾಲಾ ಮಸ್ಲಿಂ ಪೋಷಕರು ಆಕ್ಷೇಪಿಸಿದ್ದರು ಹಾಗೂ ಅವರ ಧಾರ್ಮಿಕ ಭಾವನಗಳಿಗೆ ಧಕ್ಕೆಯಾಗಿದೆ ಎಂದು  ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಇದರ ಬಗ್ಗೆ ಶಾಲಾ ಸಂಚಾಲಕರಾದ ಫಾ|. ಎಲ್ಯಾಸ್ ಡಿಸೋಜಾರವರು ಡಿ 12 ರಂದು ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಆದ ತಪ್ಪಿನ ಬಗ್ಗೆ ವಿಷಾದ ವ್ಯಕ್ತ ಪಡಿಸಿ, ಮುಂದೆ ಇಂತಹ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು. ಅಲ್ಲದೆ ಮುಸ್ಲಿಂ ಸಮುದಾಯದ ಪರವಾಗಿ ಅವರು ಶಾಲಾ ಆಡಳಿತ ಮಂಡಳಿಯ ಮುಂದಿಟ್ಟ ಬೇಡಿಕೆಗಳನ್ನು ನೆರವೇರಿಸುವುದಾಗಿ ಒಪ್ಪಿಗೆ ಸೂಚಿಸಿದರು. ಎರಡೂ ಸಮುದಾಯದ ಮುಖಂಡರು ಒಂದಾಗಿ ಅನ್ಯೋನ್ಯತೆ ಕಾಪಾಡಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುವ ನಿರ್ಧಾರ ಕೈಗೊಂಡು ಗೊಂದಲಕ್ಕೆ ತೆರೆ ಎಳೆದರು. ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು, ಮುಖಂಡರುಗಳು, ಶಾಲಾಭಿವೃದ್ಧಿ ಸಮಿತಿಯವರು, ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

error: Content is protected !!