
ಬೆಳ್ತಂಗಡಿ : ಮೇಲಂತಬೆಟ್ಟು ಮತ್ತು ಕಲ್ಕಣಿ ಚರ್ಚ್ ರೋಡ್ ಪರಿಸರದಲ್ಲಿ ನಾಯಿಗಳನ್ನು ಚಿರತೆ ಹಿಡಿದುಕೊಂಡು ಕೊಂದು ಹಾಕಿರುವ ಬಗ್ಗೆ ಗ್ರಾಮಸ್ಥರು ಮನವಿ ಪತ್ರ ನೀಡಿದ್ದಾರೆ.
ಚಿರತೆಗಳು ಸಾಲು ಮರದ ತಿಮ್ಮಕ್ಕ ಉದ್ಯಾನವನದಿಂದ ಕೆಳಗಡೆ ಇಳಿದು ಮೇಲಂತಬೆಟ್ಟು ಕ್ರೈಸ್ ಪರಿಸರದಿಂದ ಹಾಗೂ ಕಲ್ಕಣಿ ವಠಾರದಲ್ಲಿ ಹಲವಾರು ಸಾಕು ನಾಯಿಗಳನ್ನು ಕೊಂದು ತಿಂದಿವೆ. ಇನ್ನು ಹೆಚ್ಚಾಗಿ ಈ ಪರಿಸರದಲ್ಲಿ ಅಂಗನವಾಡಿ ಕೇಂದ್ರ ಮತ್ತು ಶಾಲಾ ಮಕ್ಕಳು ಸೇರಿದಂತೆ ಅನೇಕ ನಾಗರಿಕರು ದಿನನಿತ್ಯ ತಮ್ಮ ವ್ಯವಹಾರಕ್ಕೆ ನಡೆದುಕೊಂಡು ಹೋಗುತ್ತಾರೆ. ಮುಂದೆ ಈ ಚಿರತೆ ದಾಳಿ ಮಾನವರ ಮೇಲೆ ಆಗಬಹುದು ಅದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದಯಮಾಡಿ ಚಿರತೆಗಳನ್ನು ಹಿಡಿದು ಅವುಗಳನ್ನು ನಾಗರಿಕರು ಓಡಾಡುವ ಪ್ರದೇಶದಿಂದ ದೂರ ಸೂಕ್ತವಾದ ಕಾಡಿಗೆ ಬಿಟ್ಟು ನಮ್ಮನ್ನು ಹಾಗೂ ನಮ್ಮ ಸಾಕು ಪ್ರಾಣಿಗಳನ್ನು ರಕ್ಷಿಸಬೇಕಾಗಿ ಮೇಲಂತಬೆಟ್ಟು ಮತ್ತು ಕಲ್ಕಣಿ ಚರ್ಚ್ ರೋಡ್ ಬೆಳ್ತಂಗಡಿ ನಾಗರಿಕರು ಹಾಗೂ ಸ್ಥಳೀಯ ನಿವಾಸಿಗಳು ಬೆಳ್ತಂಗಡಿ ತಹಶೀಲ್ದಾರ್ ಮತ್ತು ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಡಿ.12 ರಂದು ಮನವಿ ಪತ್ರ ನೀಡಿದ್ದಾರೆ.