
ಬೆಳ್ತಂಗಡಿ: ವರದಿ ಮಾಡಿದ್ದನ್ನೆ ನೆಪವಾಗಿರಿಸಿಕೊಂಡು ಪತ್ರಕರ್ತರೊಬ್ಬರಿಗೆ ಜೀವ ಬೆದರಿಕೆ ಹಾಕಿದ ಘಟನೆ ಕಳಿಯ ಗ್ರಾಮದ ನಾಳ ಎಂಬಲ್ಲಿ ಡಿ 03 ನಡೆದಿದೆ.
ಮಡಂತ್ಯಾರು ವಲಯದ ಉದಯವಾಣಿ ವರದಿಗಾರ ಕೆ.ಎನ್.ಗೌಡ ಎಂಬವರು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 3 ರಂದು ವ್ಯವಸ್ಥಾಪನಾ ಸಮಿತಿ ಹಾಗೂ ಗ್ರಾಮಸ್ಥರ ಸಭೆ ನಡೆದಿದ್ದು, ಈ ವೇಳೆ ವ್ಯವಸ್ಥಾಪನಾ ಸಮಿತಿಯ ಕಾರ್ಯ ವೈಖರಿ ಬಗ್ಗೆ ಕೆಲವರು ಅಸಾಮಾಧಾನ ಹೊರಹಾಕಿದ್ದರು.ಈ ಬಗ್ಗೆ ವರದಿ ಮಾಡಿದ ಹಿನ್ನೆಲೆಯಲ್ಲಿ ಹರೀಶ್ ಎಂಬವರು ಪೋನ್ ಮೂಲಕ ಕಾಲರ್ ಪಟ್ಟಿ ಹಿಡಿದು ಎಳೆಯುತ್ತೆನೆ ಎಂದಿದ್ದಲ್ಲದೇ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬೆಳ್ತಂಗಡಿ ಪತ್ರಕರ್ತರ ಸಂಘ ಖಂಡನೆ,ಕ್ರಮಕ್ಕೆ ಆಗ್ರಹ
ಪತ್ರಕರ್ತನಿಗೆ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ ವ್ಯಕ್ತಪಡಿಸಿದೆಯಲ್ಲದೆ, ಈಗಾಗಲೇ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಆಗ್ರಹಿಸಿದೆ.