ಗುರಿಪಳ್ಳ, ವಿದ್ಯುತ್ ಅವಘಡ,  ವ್ಯಕ್ತಿ ಸಾವು:

 

 

 

 

ಬೆಳ್ತಂಗಡಿ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ವರು ಸಾವನ್ನಪ್ಪಿದ ಘಟನೆ ಗುರಿಪಳ್ಳ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮೃತರನ್ನು ಕನ್ಯಾಡಿ ಗ್ರಾಮದ ಗುರಿಪಳ್ಳ ಸಮೀಪದ ಕಡ್ತ್ಯಾರು ನಿವಾಸಿ ಶಿವಪ್ರಸಾದ್ ಅಡಪ(48) ಎಂದು ಗುರುತಿಸಲಾಗಿದ್ದು, ಎಂದಿನಂತೆ ಬೆಳಿಗ್ಗೆ ಮನೆ ಸಮೀಪ ಪಂಪ್ ಸ್ವಿಚ್ ಹಾಕುವ ಸಂದರ್ಭ ವಿದ್ಯುತ್ತಾಘಾತಕ್ಕೊಳಗಾಗಿ ದೂರ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ತಕ್ಷಣ ಮನೆಯವರು ಅವರನ್ನು ಉಜಿರೆ ಆಸ್ಪತ್ರೆಗೆ ಕೊಂಡು ಹೋಗಿದ್ದು , ಅಷ್ಟೊತ್ತಿಗಾಗಲೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ದೇಹ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿದ್ದು, ಹೆಚ್ವಿನ ಮಾಹಿತಿ ತಿಳಿದು ಬರಬೇಕಾಗಿದೆ.

error: Content is protected !!