ಗೇರುಕಟ್ಟೆ, ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ,: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು:

 

 

 

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯ ವಿರುದ್ದ ಫೋಕ್ಸೋ ಪ್ರಕರಣ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ ಅಂಗಡಿಗೆ ಬರುತಿದ್ದ ಪರಿಚಿತ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತಿದ್ದುದಲ್ಲದೇ ಈ ಬಗ್ಗೆ ಯಾರಲ್ಲಾದರೂ ಬಾಯಿ ಬಿಟ್ಟರೆ ಸುಮ್ಮನೆ ಬಿಡುವುದಿಲ್ಲ ಎಂದು ಬಾಲಕಿಗೆ ಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಗೇರುಕಟ್ಟೆ ಸಮೀಪದ ಟಿಕ್ಕ ಅಂಗಡಿಗೆ ಬಾಲಕಿ ಹೋಗುತಿದ್ದು ಈ ವೇಳೆ ಮಹಮ್ಮದ್ ಎಂಬಾತ ದೌರ್ಜನ್ಯ ಎಸಗಿದ ಬಗ್ಗೆ ಬಾಲಕಿ ಪೋಷಕರಲ್ಲಿ ತಿಳಿಸಿದ್ದು,ಹೆತ್ತವರು ಈ ಬಗ್ಗೆ ವಿಚಾರಿಸಲು ಹೋದ ವೇಳೆ ಮಾತಿನ ಚಕಮಕಿ ನಡೆದಿದೆ.ಈ ವೇಳೆ ಬಾಲಕಿಯ ತಂದೆಗೆ ಜೀವ ಬೆದರಿಕೆವೊಡ್ಡಿರುವುದಾಗಿಯೂ ಆರೋಪಿಸಲಾಗಿದೆ.ಅದಲ್ಲದೇ ಪ್ರಕರಣ ಮುಚ್ಚಿ ಹಾಕಲು ಬಾಲಕಿ ಮೇಲೆ ಕಳ್ಳತನದ ಆರೋಪ ಹೊರಿಸಿ ವಿಡಿಯೋ ವೈರಲ್ ಮಾಡಿದ್ದು ಇದರಿಂದ ಬಾಲಕಿ‌ ಶಾಲೆಗೆ ಹೋಗಲು ಹಿಂಜರಿಯುತಿದ್ದಾಳೆ ಎನ್ನುವ ಬಗ್ಗೆಯೂ ಆರೋಪಿಸಲಾಗಿದೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!