ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶಾಸಕ ಹರೀಶ್ ಪೂಂಜ ಭೇಟಿ:

 

 

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ತಾಲೂಕು ಇದರ ವತಿಯಿಂದ      ಶಾಸಕ ಹರೀಶ್ ಪೂಂಜರನ್ನು ನ.24ರಂದು ಭೇಟಿ ಮಾಡಲಾಯಿತು.

.
ಈ ಹಿಂದೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಮುದಾಯ ಭವನಕ್ಕೆ ಅನುದಾನವನ್ನು ನೀಡುವುದಾಗಿ ಶಾಸಕರು ವಾಗ್ದಾನವನ್ನು ನೀಡಿದ್ದು, ಅದರಂತೆ ಇದೀಗ ವಿಶೇಷ ಅನುದಾನದಲ್ಲಿ 1 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸುವುದಾಗಿ ತಿಳಿಸಿದರು. ಕೆಲವೇ ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು, ಶೀಘ್ರವಾಗಿ ಅನುದಾನ ಸಂಘದ ಕೈಸೇರುವ ನಿರೀಕ್ಷೆಯಿದೆ. ಈ ಸಂದರ್ಭ ಅನುದಾನವನ್ನು ತರುವಲ್ಲಿ ಸತತವಾಗಿ ಪ್ರಯತ್ನಿಸುತ್ತಿರುವ ಶಾಸಕ ಹರೀಶ್ ಪೂಂಜರಿಗೆ ಸಂಘದ ಮುಖಂಡರು ಧನ್ಯವಾದವನ್ನು ತಿಳಿಸಿದರು.
ಶಾಸಕರ ಭೇಟಿಯ ವೇಳೆ ಗೌಡರಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ತಾಲೂಕು ಇದರ ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ ಬೆಳಾಲು, ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕಾರ್ಯದರ್ಶಿ ಗಣೇಶ್ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್ ಗೌಡ ನಡ, ನಿರ್ದೇಶಕರುಗಳಾದ ಜಯಾನಂದ ಗೌಡ, ಸುನಿಲ್ ಗೌಡ ಅನಾವು, ಮಾಧವ ಗೌಡ ಬೆಳ್ತಂಗಡಿ, ವಸಂತ ಗೌಡ ನಡ, ದಿನೇಶ್ ಗೌಡ ಕೊಯ್ಯೂರು, ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಗೌಡ ಕೌಡಂಗೆ, ಉಪಾಧ್ಯಕ್ಷ ನಿತಿನ್ ಗೌಡ ಕಲ್ಮಂಜ, ಸದಸ್ಯರಾದ ಪ್ರದೀಪ್ ನಾಗಾಜೆ ನಾವೂರು, ಭರತ್ ಗೌಡ ಮತ್ತು ಕಣಿಯೂರು ಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ ಗೌಡ ಮೊಗ್ರು ಉಪಸ್ಥಿತರಿದ್ದರು.

error: Content is protected !!