
ಬೆಳ್ತಂಗಡಿ:ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ತೆರಳುತಿದ್ದ ವೇಳೆ ನಡ ಗ್ರಾಮದ ಹೊಕ್ಕಿಲ ಎಂಬಲ್ಲಿ ನವೆಂಬರ್ 16 ರಂದು ರಾತ್ರಿ ನಡೆದ ರಿಕ್ಷಾ ಅಪಘಾತದಲ್ಲಿ ಮೃತಪಟ್ಟ ನಾವೂರು ಗ್ರಾಮದ ವಿದ್ಯಾರ್ಥಿ ತನ್ವಿತ್ ಮನೆಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಾಯಿಲ, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಮೋರ್ತಾಜೆ, ಬಿಜೆಪಿ ದ.ಕ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣೇಶ್ ನಾವೂರು, ಶಕ್ತಿಕೇಂದ್ರ ಅಧ್ಯಕ್ಷ ಪ್ರದೀಪ್, ಮಂಡಲ ಕಾರ್ಯದರ್ಶಿ ಶ್ರೀಮತಿ ವೇದಾವತಿ, ಗ್ರಾ.ಪಂ ಸದಸ್ಯೆ ಪ್ರಿಯ ಲಕ್ಷ್ಮಣ ಉಪಸ್ಥಿತರಿದ್ದರು.