ಅಂಡಿಂಜೆ ಗ್ರಾಮ ಮಟ್ಟದ ಜನಸ್ಪಂದನ ಸಭೆ:ಹಲವು ಸಮಸ್ಯೆಗಳ ವಿಲೇವಾರಿ: ಬಿಪಿಎಲ್ ಕಾರ್ಡ್ ಡಿಲೀಟ್ ಆಗುವ ಭಯ,ಸಾರ್ವಜನಿಕರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಬ್ರೋಕರ್ ಗಳ ಹಾವಳಿ ನಿಯಂತ್ರಿಸಿ, ಶಾಸಕರಿಗೆ ಗ್ರಾಮಸ್ಥರ ಮನವಿ: ಅಕ್ರಮ ಮರಳುಗಾರಿಕೆಗೆ ಪೊಲೀಸರಿಂದಲೇ ಡೀಲ್:ಗ್ರಾಮಸ್ಥರ ಗಂಭೀರ ಆರೋಪ:

 

 

ಬೆಳ್ತಂಗಡಿ: ಕಳೆದ ಕೆಲವು ಸಮಯಗಳಿಂದ ಬಿಪಿಎಲ್ ಕಾರ್ಡ್ ಗಳು ಡಿಲೀಟ್ ಆಗುತ್ತಿದೆ. ಇದರಿಂದ ಬಡವರಿಗೆ ಸಮಸ್ಯೆಯಾಗುತ್ತಿದೆ. ಎಂದು ಗ್ರಾಮಸ್ಥರು ಅಸಾಮಾಧಾನ ಹೊರಹಾಕಿದ ಘಟನೆ ಅಂಡಿಂಜೆ ಜನಸ್ಪಂದನ ಸಭೆಯಲ್ಲಿ ನಡೆದಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಅಂಡಿಂಜೆ ಗ್ರಾಮ ಮಟ್ಟದ ಜನಸ್ಪಂದನ ಸಭೆ ನ 18 ರಂದು ನಡೆಯಿತು. ಈ ವೇಳೆ ಮಾತನಾಡಿದ ಪಂಚಾಯತ್ ಸದಸ್ಯರೊಬ್ಬರು ಬಡವರಿಗೆ ವಿತರಿಸಲಾದ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ಬಗ್ಗೆ ನೋಟೀಸ್ ಗಳು ಬರುತಿದ್ದು ಇದರಿಂದ ಬಡವರಿಗೆ ಸಮಸ್ಯೆಗಳಾಗುತ್ತಿದೆ.

 

ಅದ್ದರಿಂದ ಈ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಬೇಕು , ಯಾವುದೇ ಕಾರಣಕ್ಕೂ ಕಾರ್ಡ್ ರದ್ದುಗೊಳಿಸಬಾರದು ಎಂದು ಶಾಸಕರಲ್ಲಿ ಮನವಿ ಮಾಡಿದಾಗ, ಯಾವುದೇ ಕಾರಣಕ್ಕೂ ಕಾರ್ಡ್ ರದ್ದುಗೊಳ್ಳುವುದಿಲ್ಲ, ಕೆಲವರು ಸಾಲ ಪಡೆಯುವ ಉದ್ಧೇಶಕ್ಕಾಗಿ ಇನ್ ಕಂ ಸರ್ಟಿಫಿಕೇಟ್ ಹಾಗೂ ವಾರ್ಷಿಕ ವರಮಾನ ಹೆಚ್ಚು ಇರುವವರಿಗೆ ದಾಖಲೆ ನೀಡುವಂತೆ ನೋಟೀಸ್ ಜಾರಿಗೊಳಿಸಲಾಗಿದೆ. ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದಾಗ ಬಡವರು ಮನೆ ಕಟ್ಟುವ ಉದ್ಧೇಶದಿಂದ ಸಾಲ ಪಡೆಯಬೇಕಾದರೆ ಬ್ಯಾಂಕಿಗೆ ಇನ್ ಕಂ ಸರ್ಟಿಫಿಕೇಟ್ ನೀಡಬೇಕಾಗುತ್ತದೆ. ಇದನ್ನೆ ನೆಪವಾಗಿಸಿಕೊಂಡು ಕಾರ್ಡ್ ರದ್ದುಗೊಳಿಸುವ ಬಗ್ಗೆ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾಪಿಸಿದಾಗ, ಈ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

 

 

ಕಳೆದ ಹಲವಾರು ಸಮಯಗಳಿಂದ ಅರಣ್ಯ ಇಲಾಖೆಯವರ ಕಾನೂನಿಂದಾಗಿ ಅಕ್ರಮ ಸಕ್ರಮ ಸೇರಿದಂತೆ 94 ಸಿ ಯವರಿಗೆ ತೊಡಕ್ಕಾಗಿದೆ. ಈ ಬಗ್ಗೆ ಪರಿಶೀಲಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಅಲ್ಲಲ್ಲಿ ಅಕ್ರಮ ಮರಳುಗಾರಿಕೆ ನಡೆಯುತಿದ್ದರೂ ಪೊಲೀಸರು ಸುಮ್ಮನಿದ್ದಾರೆ. ಅದರೆ ಬಡವನೊಬ್ಬ ತುರ್ತು ಕೆಲಸಕ್ಕಾಗಿ ಒಂದು ಪಿಕಪ್ ಮರಳು ತೆಗೆದರೆ ಅವರ ಮೇಲೆ ಪೊಲೀಸರು ಕೇಸ್ ಹಾಕುತ್ತಾರೆ.ಅಕ್ರಮ ಮರಳುಗಾರಿಕೆಗೆ ಪೊಲೀಸರೆ ಡೀಲ್ ನಡೆಸುತ್ತಾರೆ ಎಂದು ಆರೋಪಿಸಿದ ಗ್ರಾಮಸ್ಥರು ಈ ರೀತಿ ಮಾಡಿದರೆ ಬಡವರು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಸಭೆಯ ಮುಂದಿಟ್ಟರು.

 

ಈ ವೇಳೆ ಮಾತನಾಡಿದ ಶಾಸಕರು ಒಂದು ವೇಳೆ ಅಕ್ರಮ ಮರಳುಗಾರಿಕೆ ನಡೆಯತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದರೆ ತಕ್ಷಣ ನನ್ನ ಗಮನಕ್ಕೆ ತಂದಲ್ಲಿ ಗಣಿ ಇಲಾಖೆಗೆ ದೂರು ಸಲ್ಲಿಸುವ ವ್ಯವಸ್ಥೆ ಮಾಡಲಾಗುವುದು ಎಂದರು. ಅಧಿಕಾರಿಗಳು ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ ಬ್ರೋಕರ್ ಗಳ ಹಾವಳಿ ನಿಯಂತ್ರಿಸಿ ಬ್ರೋಕರ್ ಗಳ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿದರೆ ಕೆಲಸಗಳು ಆಗುತ್ತೆ, ಅದ್ದರಿಂದ ಸರ್ಕಾರಿ ಕಛೇರಿಗಳಲ್ಲಿ ಬ್ರೋಕರ್ ಗಳನ್ನು ನಿಯಂತ್ರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು.9/11 ಅಕ್ರಮ ಸಕ್ರಮ, ವಿದ್ಯುತ್ ಸಮಸ್ಯೆ,ರಸ್ತೆ ,ಸೇತುವೆ, ಕೆಂಪುಕಲ್ಲು ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಭೆಯ ಮುಂದಿಟ್ಟಾಗ ಪ್ರತಿಕ್ರಿಯಿಸಿದ ಶಾಸಕರು ಸರ್ಕಾರದ ಕೆಲವೊಂದು ಕಾನೂನಿಂದಾಗಿ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಈಗಾಗಲೇ ಜಿಲ್ಲೆಯ ಶಾಸಕರುಗಳೆಲ್ಲರೂ ಸದನದಲ್ಲಿ ಚರ್ಚೆ ನಡೆಸಿದರೂ ಸರ್ಕಾರ ಗಮನ ಹರಿಸಿಲ್ಲ ಮುಂದಿನ ಕಲಾಪದಲ್ಲಿಯೂ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು. ಅನುದಾನದ ಕೊರತೆಯಿಂದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ.ಎಂದು ಶಾಸಕರು ಈ ವೇಳೆ ತಿಳಿಸಿದರು.ಸಭೆಯಲ್ಲಿ ಹಕ್ಜುಪತ್ರ ವಿತರಿಸಲಾಯಿತು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!