ಬೆಳ್ತಂಗಡಿ, ಇಂದಿರಾ ಕ್ಯಾಂಟಿನ್ ಗೆ ಬಂದವರಿಗೆ ನಿರಾಸೆ: ಬೆಳಗ್ಗೆಯೇ ಉಪಹಾರ ಖಾಲಿ:ದಿನಂಪ್ರತಿ 200 ಕೂಪನ್ ಗೆ ಮಾತ್ರ ಅವಕಾಶ…!

 

 

ಬೆಳ್ತಂಗಡಿ: ತಾಲೂಕಿನ ಅಂಬೇಡ್ಕರ್ ಭವನದ ಬಳಿ ಶನಿವಾರ ಲೋಕಾರ್ಪಣೆಗೊಂಡ ಇಂದಿರಾ ಕ್ಯಾಂಟಿನ್ ಗೆ ಪ್ರಾರಂಭದ ಮೊದಲ ಭಾನುವಾರವೇ ಉಪಹಾರಕ್ಕೆ ಬಂದವರು ಕಂಡೀಷನ್ ಹಾಗೂ ಸಮಯದ ಅವಧಿ ಗೊತ್ತಿಲ್ಲದೆ ನಿರಾಸೆಯಿಂದ ಹಿಂದಿರುಗುವಂತಾಗಿದೆ.ಬೆಳಿಗ್ಗೆ 7.30 ಗಂಟೆಗೆ ಕ್ಯಾಂಟಿನ್ ಪ್ರಾರಂಭಗೊಂಡು ಕೇವಲ 200 ಕೂಪನ್ ಗೆ ಮಾತ್ರ ಅವಕಾಶ ಇದ್ದುದರಿಂದ ಅದು ಬೇಗನೇ ಖಾಲಿಯಾಗಿದೆ. ಅದೇ ರೀತಿ ಮಧ್ಯಾಹ್ನ 200 ರಾತ್ರಿ 200 ಊಟ ನೀಡಲು ಅವಕಾಶ ಎಂಬ ಮಾಹಿತಿ ಲಭ್ಯವಾಗಿದೆ , ಭಾನುವಾರ ಬೆಳಿಗ್ಗೆ ಬಂದವರಿಗೆ ಚಾ ತಿಂಡಿ ಸಿಕ್ಕಿದ್ದು ಸುಮಾರು 9 ಗಂಟೆ ಸುಮಾರಿಗೆ ಉಪಾಹಾರ ಖಾಲಿಯಾಗಿದೆ. ಈ ವಿಚಾರ ಗೊತ್ತಿಲ್ಲದೇ ಬಂದವರು ಉಪಾಹಾರ ಸಿಗದೇ ಹಿಂದಿರುಗಿ ಹೋಗಿದ್ದಾರೆ. ಕೆಲವರು ಇಂದಿರಾ ಕ್ಯಾಂಟಿನ್ ಆಹಾರದ ರುಚಿ ನೋಡ ಬೇಕು ಎಂದು ಕುತೂಹಲದಿಂದ ಬಂದವರಿಗೂ ನಿಬಂಧನೆಗಳು ಗೊತ್ತಿಲ್ಲದೇ  ತಿಂಡಿ ಸಿಗದೇ ನಿರಾಸೆಯಿಂದ ಹಿಂದಿರುಗಿದ್ದಾರೆ.ಮುಂದಿನ ದಿನಗಳಲ್ಲಿ ಕೂಪನ್ ಸಂಖ್ಯೆ ಹೆಚ್ಚು ಮಾಡುವ ಸಾಧ್ಯತೆಯೂ ಇದೆ.

ಸಮಯಾವಧಿ: ಬೆಳಗಿನ ಉಪಾಹಾರ (7:30 AM – 10:00 AM), ಮಧ್ಯಾಹ್ನದ ಊಟ (12:30 PM – 3:30 PM) ಮತ್ತು ರಾತ್ರಿಯ ಊಟ (6:30 PM – 8:30 PM) ಅನ್ನು ನೀಡಲಾಗುತ್ತದೆ.

error: Content is protected !!