ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ: ವಸಂತ ಬಂಗೇರರ ನೆನಪಿಸದ ಬಗ್ಗೆ ಬಂಗೇರ ಅಭಿಮಾನಿಗಳಿಗೆ ಬೇಸರ…!

 

 

 

ಬೆಳ್ತಂಗಡಿ: ಬಡವರ ಕಣ್ಮಣಿ  ಕಳಂಕರಹಿತ ರಾಜಕಾರಣಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದ ಬೆಳ್ತಂಗಡಿ ಜನತೆಯ ಪ್ರೀತಿಯ ದಿವಂಗತ ವಸಂತ ಬಂಗೇರ ಅವರ ಕನಸಿನ ಕೂಸು ಇಂದಿರಾ ಕ್ಯಾಂಟಿನ್ ಶನಿವಾರ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಉದ್ಘಾಟಿಸಿ ಲೋಕಾರ್ಪಣೆ ಗೊಳಿಸಿದರು.  ದಿ ವಸಂತ ಬಂಗೇರ ಅವರು ಶಾಸಕರಾಗಿದ್ದ ವೇಳೆ ಬೆಳ್ತಂಗಡಿ ಜನತೆಗೂ ಇಂದಿರಾ ಕ್ಯಾಂಟಿನ್ ಬೇಕು ಎಂಬ ನಿಟ್ಟಿನಲ್ಲಿ ಅವರ ಶತ ಪ್ರಯತ್ನದ ಫಲವಾಗಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಗ್ರಾಮೀಣ ಭಾಗಗಳನ್ನೊಳಗೊಂಡ ಬೆಳ್ತಂಗಡಿ ತಾಲೂಕಿಗೂ ಇಂದಿರಾ ಕ್ಯಾಂಟಿನ್ ಮಂಜೂರುಗೊಳಿಸಿದ್ದರು. ಅದಕ್ಮಾಗಿ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಹಿಂಬದಿ ಜಾಗ ಗುರುತಿಸಿ ಅಡಿಪಾಯ ಹಾಕಲಾಗಿತ್ತು . ಅದರೆ ಕೆಲವೊಂದು ಕಾನೂನಾತ್ಮಕ ತೊಡಕು ಹಾಗೂ ನಂತರದಲ್ಲಿ ಸರ್ಕಾರ ಬದಲಾವಣೆಯಾದ ವೇಳೆ ಇಂದಿರಾ ಕ್ಯಾಂಟೀನ್ ನಿರ್ಮಾಣದ ಬಂಗೇರ ಅವರ ಕನಸು ನನಸಾಗದೇ ಹಾಗೆಯೇ ಉಳಿಯಿತು. ಅದರೆ ಮತ್ತೆ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ನಂತರ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಚಾಲನೆ ದೊರೆತು ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ನಿರ್ಮಾಣಗೊಂಡು ಇದೀಗ ಲೋಕಾರ್ಪಣೆಗೊಂಡಿದೆ.‌ಅದರೆ ಸದಾ ಬಡವರ ಪರ ಧ್ವನಿಯಾಗಿದ್ದ ಮಾಜಿ ಶಾಸಕ ದಿ ವಸಂತ ಬಂಗೇರ ಅವರ ನೆನಪು ಮಾತ್ರ ಕಾರ್ಯಕ್ರಮದಲ್ಲಿ ಯಾರಿಗೂ ಬಾರದಿರುವುದು ಕೆಲವು ಬಂಗೇರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಒಂದು ವೇಳೆ ವಸಂತ ಬಂಗೇರ ಅವರು ಈ ಸಂದರ್ಭದಲ್ಲಿ ಇರುತಿದ್ದರೆ ಎಷ್ಟೊಂದು ಸಂತೋಷ ಪಡುತಿದ್ದರು.ಅದರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಲ್ಲೂ ಕೂಡ ಅವರ ಹೆಸರು ಉಲ್ಲೇಖ ಮಾಡದಿರುವುದು ಬೇಸರ ತರಿಸಿದೆ. ಬೆಳ್ತಂಗಡಿ ಜನತೆಗಾಗಿ ಸದಾ ಮಿಡಿಯುತಿದ್ದ ಐದು ಬಾರಿ ಶಾಸಕರಾಗಿದ್ದ  ತಾಲೂಕು ಕಂಡ ಶ್ರೇಷ್ಠ ವ್ಯಕ್ತಿ ವಸಂತ ಬಂಗೇರಂತಹ ವ್ಯಕ್ತಿ ಇನ್ನು ತಾಲೂಕಿಗೆ ಸಿಗಲು ಸಾಧ್ಯವೇ ಇಲ್ಲ ಅದರೆ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರ ನೆನಪು  ಆಗದೇ ಇರುವುದು ತುಂಬಾ ದುರಂತ . ಎಂಬ ಬಗ್ಗೆ ಬಂಗೇರ ಅವರ ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

error: Content is protected !!