ಉಜಿರೆ: ಜೀಪ್ ಗೂಡ್ಸ್ ವಾಹನ ನಡುವೆ ಅಪಘಾತ, ಮಹಿಳೆಗೆ ಗಾಯ:

 

 

ಉಜಿರೆ: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಉಜಿರೆಯಲ್ಲಿ  ಗೂಡ್ಸ್ ವಾಹನಕ್ಕೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. ಉಜಿರೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾರ್ಮಾಡಿ ಕಡೆಗೆ ಚಲಿಸುತಿದ್ದ ಪ್ರಯಾಣಿಕರಿದ್ದ ಜೀಪು ಎಸ್.ಡಿ ಎಂ ಆಸ್ಪತ್ರೆ ಬಳಿ ರಾತ್ರಿ 7.30 ರ ಸುಮಾರಿಗೆ ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಬರುತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜೀಪ್ ನಲ್ಲಿದ್ದ ಮಹಿಳೆಯೊಬ್ಬರ ಕಾಲಿಗೆ ಗಾಯಗಳಾಗಿದ್ದು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೂಡ್ಸ್ ವಾಹನ ಒಳ ರಸ್ತೆಯಿಂದ ಒಮ್ಮೆಲೆ ಮುಖ್ಯ ರಸ್ತೆಗೆ ಬಂದ ವೇಳೆ ಹೆದ್ದಾರಿಯಲ್ಲಿ ಬರುತಿದ್ದ ಜೀಪ್ ಡಿಕ್ಕಿ ಹೊಡೆದಿದ್ದಲ್ಲದೇ ಅಪಘಾತ ತಪ್ಪಿಸುವ ವೇಳೆ ಮತ್ತೊಂದು ಕಾರಿಗೂ ಜೀಪು ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿ ಸ್ವಲ್ಪ ಹೊತ್ತು ವಾಹನ ದಟ್ಟನೆ ಉಂಟಾಗಿದ್ದು ಪೊಲೀಸರು ಆಗಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

error: Content is protected !!