ಬಂಗ್ಲೆಗುಡ್ಡೆ ಪ್ರದೇಶಕ್ಕೆ ಮತ್ತೆ ತೆರಳಿದ  ಎಸ್.ಐ‌.ಟಿ ತಂಡ:

 

 

ಬೆಳ್ತಂಗಡಿ : ಬಂಗ್ಲೆಗುಡ್ಡೆ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮತ್ತೆ ಎಂಟ್ರಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶಕ್ಕೆ ಅ.6 ರಂದು ಮಧ್ಯಾಹ್ನ 1 ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಬಂದು ಸರ್ವೆ ಕಾರ್ಯ ನಡೆಸುತ್ತಿದ್ದಾರೆ.

ಏಳು ಅಸ್ಥಿಪಂಜರ ಪತ್ತೆಯಾದ ಜಾಗ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಸರ್ವೆ ಮಾಡಿ ಖಚಿತ ಪಡಿಸಿ ಎಸ್.ಐ.ಟಿ ಅಧಿಕಾರಿಗಳಿಗೆ ವರದಿ ನೀಡಲು ಆಗಮಿಸಿದ್ದಾರೆ‌ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

error: Content is protected !!