ಬೆಳ್ತಂಗಡಿ:ಮಸೀದಿಗೆ ನಮಾಜ್ ಗಾಗಿ ತೆರಳಿದ್ದ ವೇಳೆ ಹೃದಯಾಘಾತದಿಂದ ಲಾಯಿಲ ಗ್ರಾ.ಪಂ ಮಾಜಿ ಸ್ಸದಸ್ಯ ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ಉಜಿರೆಯಲ್ಲಿ ನಡೆದಿದೆ.
ಕುಂಟಿನಿ ನಿವಾಸಿ ನಿವೃತ್ತ ವಿದೇಶಿ ಉದ್ಯೋಗಿ ಖತಾರ್ ಮುಹಮ್ಮದ್ ಕುಂಞಿ ಹಾಜಿ(67) ಅವರು ಅ.3 ರಂದು ಶುಕ್ರವಾರ ಎಂದಿನಂತೆ ಅವರು ಶುಕ್ರವಾರದ ನಮಾಝ್ ಗಾಗಿ ಕುಂಠಿನಿ ಮಸೀದಿ ಗೆ ತೆರಳಿದ್ದ ವೇಳೆ ಹಠಾತ್ತನೇ ಹೃದಯಘಾತ ಸಂಭವಿಸಿದ್ದು. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟೊತ್ತಿಗಾಗಲೇ ಅವರು ನಿಧನಹೊಂದಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.
ವಿದೇಶದ ಖತಾರ್ ನ
ಫಿಫಾ ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ಸುದೀರ್ಘ 30 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಕೆಲ ವರ್ಷಗಳ ಹಿಂದೆ ಊರಿಗೆ ಮರಳಿದ್ದರು. ಲಾಯಿಲ ಗ್ರಾ.ಪಂ ಮಾಜಿ ಸದಸ್ಯರಾಗಿದ್ದ ಅವರು ಕಾಂಗ್ರೆಸ್ ಪಕ್ಷದ ತಾಲೂಕು ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷರೂ ಆಗಿದ್ದರು. ಕುಂಟಿನಿ
ಅಲ್ ಬುಖಾರಿ ಜುಮ್ಮಾ ಮಸ್ಜಿದ್ ಇದರ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಸಮಾಜ ಸೇವಕರಾಗಿದ್ದ ಅವರು ಖತಾರ್ ಮುಸ್ಲಿಂ ಅಸೋಸಿಯೇಷನ್ ಸಂಘಟನೆಯ ಮೂಲಕ ಬೆಳ್ತಂಗಡಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆಯಾಗಿ ನೀಡುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದರು. ಅಲ್ಲದೆ ತಾಲೂಕಿನ
ಮಸೀದಿ ಮತ್ತು ಮದರಸಗಳಿಗೆ ಸಹಾಯ
ಒದಗಿಸಿಕೊಟ್ಟಿದ್ದರು.
ಗ್ರಾ.ಪಂ ಸದಸ್ಯರಾಗಿ ಅವರು ಮುಂದಿನ ತಿಂಗಳಿಗೆ 50 ವರ್ಷ ತುಂಬಿದ ಬಗ್ಗೆ ಕಾರ್ಯಕ್ರಮ ನಡೆಸುವ ಇರಾದೆಯಲ್ಲಿದ್ದರು.
ಮೃತರು ಪತ್ನಿ ಖತೀಜಮ್ಮ, ಏಳು ಗಂಡು ಮಕ್ಕಳು, ಓರ್ವೆ ಹೆಣ್ಣು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.