ನೆಲ್ಯಾಡಿ: ರಾಷ್ಟ್ರ ಚಿಂತನೆಯೊಂದಿಗೆ ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ಕ್ರೀಡಾ ವಿಭಾಗದ ಸಂತೋಷ್ ಪಿಂಟೋ ಮತ್ತು ವಿನ್ಸೆಂಟ್ ಸಿ. ಎಸ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಸುಮಾರು ಎರಡು ಕಿಲೋಮೀಟರ್ ದೂರದ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಯಿತು…
ಈ ಓಟದಲ್ಲಿ ಪ್ರಥಮ ಸೃಜನ್ ದ್ವಿತೀಯ ಲವನೀಶ ತೃತೀಯ ಸ್ವಸ್ಥಿಕ್ ಕೆ.ಎಸ್. ಹಾಗೂ ನಾಲ್ಕನೇ ಸ್ಥಾನವನ್ನು ಸುದರ್ಶನ್ ಎ.ಆರ್. ಪಡೆದುಕೊಂಡರು. ಪಾಲ್ಗೊಂಡ ಎಲ್ಲರಿಗೂ
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ವತಿಯಿಂದ ಬಹುಮಾನ ಹಾಗೂ ಸರ್ಟಿಫಿಕೇಟ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ತೋಮಸ್, ಸೀನಿಯಾರ್ ಚೇಂಬರ್ ನೆಲ್ಯಾಡಿ ಲೀಜಿಯನ್ ಅಧ್ಯಕ್ಷ Snr ಪಿಪಿಎಫ್ ಪ್ರಕಾಶ್ ಕೆ ವೈ, ತರಬೇತಿ ಅಧಿಕಾರಿ ಜೋನ್ ಪಿ ಎಸ್, ಕಿರಿಯ ತರಬೇತಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು..