ಬೆಳ್ತಂಗಡಿ:ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ್ದೇನೆ ಎಂದು ಅನಾಮಧೇಯ ಸ್ವಚ್ಛತಾ ಕಾರ್ಮಿಕ ನೀಡಿದ ದೂರಿನ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡದ ಮೂಲಕ ಸಮಗ್ರ ತನಿಖೆಗೆ ಆದೇಶ ನೀಡಿತ್ತು. ಕಳೆದ ಎರಡು ವಾರಗಳಿಂದ ಎಸ್ಐಟಿ ಹಾಗೂ ಅಧಿಕಾರಿಗಳ ತಂಡ ಧರ್ಮಸ್ಥಳ ಗ್ರಾಮದ ನೇತ್ರಾವತಿ ಅರಣ್ಯ ಪ್ರದೇಶದಲ್ಲಿ ಅನಾಮಧೇಯ ವ್ಯಕ್ತಿ ಗುರುತಿಸಿದ ಸ್ಥಳಗಳಲ್ಲಿ ಶೋಧ ಕಾರ್ಯವನ್ನು ಪ್ರಾರಂಭಿಸಿತು.ಕಳೆದ ಎರಡು ವಾರಗಳಿಂದ ತಹಶೀಲ್ದಾರ್ , ಕಂದಾಯ ಅಧಿಕಾರಿಗಳು ಈ ಪ್ರಕರಣದ ತನಿಖೆಯಲ್ಲಿ ಭಾಗವಹಿಸಿರುವುದರಿಂದ ತಹಶೀಲ್ದಾರ್ ಸಾರ್ವಜನಿಕ ಕೆಲಸಗಳಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಕಳೆದ ಎರಡು ವಾರಗಳಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ ತಾಲೂಕು ಕಛೇರಿಗೆ ಜನ ಸಾಮಾನ್ಯರು ಹೋದಾಗ ತಹಶೀಲ್ದಾರ್ ಇಲ್ಲ ಎನ್ನುವ ಉತ್ತರ ಕೇಳಿ ಬರುತ್ತಿದೆ. ಅಲೆದಾಟ ಮಾಡಿ ಮಾಡಿ ಸಾಕಾಗಿ ಹೋಗಿದೆ. ಎಂದು ಮಲವಂತಿಗೆ ಗ್ರಾಮದ ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಿಂದ ತಾಲೂಕು ಕಛೇರಿ ಕೆಲಸಗಳು ಸಂಪೂರ್ಣ ಸ್ಥಬ್ದಗೊಂಡಿದೆ.ಅದಲ್ಲದೇ ಪುತ್ತೂರು ಎಸಿ ಕಛೇರಿಯಲ್ಲೂ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರು ಬೇಸರ ವ್ಯಕ್ತಪಡಿಸುತಿದ್ದಾರೆ.ಶವ ಹೂತಿಟ್ಟ ಪ್ರಕರಣದ ತನಿಖೆ ಯಾವಾಗ ಮುಗಿಯಬಹುದು ಎಂದು ಸಾರ್ವಜನಿಕರು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಒಟ್ಟಿನಲ್ಲಿ ಆದಷ್ಟೂ ಬೇಗ ಶೋಧ ಕಾರ್ಯ ಮುಗಿಯಲಿ ಜನ ಸಾಮಾನ್ಯರಿಗೆ ತೊಂದರೆ ದೂರವಾಗಲಿ.ಮೊದಲೇ ತಾಲೂಕು ಕಛೇರಿಯಲ್ಲಿ ಸಾರ್ವಜನಿಕ ಕೆಲಸ ಆಮೆಗತಿಯಲ್ಲಿ ನಡೆಯುವುದು ಈಗಂತೂ ಅದನ್ನು ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ,