ಬೆಳ್ತಂಗಡಿ : ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಮೂವರು ಯೂಟ್ಯೂಬರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆ.7 ರಂದು ಹಲ್ಲೆಗೊಳಗಾದ ಹರೀಶ್ ನಾಯ್ಕ್ ನೀಡಿದ ದೂರಿನ ಮೇರೆಗೆ BNS- 2023
(U/s-126(2),115(2),352,r/w 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 6 ರಂದು ಸಂಜೆ 4:40 ಸುಮಾರಿಗೆ ಧರ್ಮಸ್ಥಳ ಗ್ರಾಮದ ಪಾಂಗಳ ರಸ್ತೆಯ ಬಳಿ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದ ವೇಳೆ ವಿಡಿಯೋ ಕ್ಯಾಮರಾ ಹಿಡಿದುಕೊಂಡು ನಿಂತುಕೊಂಡಿದ್ದ ಮೂರು ಜನರು ಕೈ ಸನ್ನೆ ಮಾಡಿ ನಿಲ್ಲಿಸುವಂತೆ ಸೂಚಿಸಿದ್ದು ಅದರಂತೆ ಹರೀಶ್ ನಾಯ್ಕ್ ಮೋಟಾರ್ ಸೈಕಲ್ ಸಿಲ್ಲಿಸಿದಾಗ ಹೆಸರು ಕೇಳಿದಾಗ ನಾನು ಹರೀಶ್ ನಾಯ್ಕ್ ಎಂದು ತಿಳಿಸಿರುತ್ತಾರೆ. ನಂತರ ಅವರು ರಾಂ ಪೇಜ್ ಯೂಟ್ಯೂಬರ್ ಎಂದು ತಿಳಿಸಿ. ಈ ಪಾಂಗಳ ರಸ್ತೆಯ ಅಕ್ಕಪಕ್ಕದಲ್ಲಿ ಹೆಣಗಳನ್ನು ಹೂತಿದ್ದಿರಾ ನಿಮಗೆ ಗೊತ್ತಿದೆಯಾ? ಎಂದು ಕೇಳಿದಾಗ ಹರೀಶ್ ನಾಯ್ಕ್ ಗೊತ್ತಿಲ್ಲ ಎಂದಾಗ ಹೇಳಿ ಈ ಬಗ್ಗೆ ತಕರಾರು ಎತ್ತಿ ಮೂವರು ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ಹರೀಶ್ ನಾಯ್ಕ್ ಎದೆಗೆ ಮೂರು ಜನರ ಪೈಕಿ ಕುಡ್ಲ ರಾಂ ಪೇಜ್ ಎಂಬ ಯೂಟ್ಯೂಬರ್ ಕೈಯಿಂದ ಗುದ್ದಿರುತ್ತಾನೆ. ಬಳಿಕ ಆಲ್ಲಿದ್ದ ಇಬ್ಬರು ವ್ಯಕ್ತಿಗಳು ಹರೀಶ್ ನಾಯ್ಕ್ ರ ಬೆನ್ನಿಗೆ ಸೊಂಟಕ್ಕೆ ಕೈಯಿಂದ ಗುದ್ದಿ ಕಾಲಿನಿಂದ ಒದ್ದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.