ಅಕ್ಷಯ ಬಂಟರ ಗ್ರಾಮ ಸಮಿತಿ ಮುಂಡೂರು: “ಆಟಿದ ನೆಂಪು‌” ಕಾರ್ಯಕ್ರಮ:

 

 

ಬೆಳ್ತಂಗಡಿ :ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಅಕ್ಷಯ ಬಂಟರ ಗ್ರಾಮ ಸಮಿತಿ , ಮುಂಡೂರು ಇದರ ವತಿಯಿಂದ ಆಟಿದ ನೆಂಪು ಕಾರ್ಯಕ್ರಮ ಕಲ್ಲಂಡ ಪುಷ್ಪ ವಸಂತ ಶೆಟ್ಟಿಯವರ ಮನೆಯ ವಠಾರದಲ್ಲಿ ನಡೆಯಿತು,

 

 ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಸಂಘದ, ನಿರ್ದೇಶಕ ನಾರಾಯಣ ಶೆಟ್ಟಿ ದೀಪ ಬೆಳಗಿಸಿ, ಚೆನ್ನೆ ಮಣೆ ಆಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ, ಕಳೆದ 19 ವರ್ಷಗಳಿಂದ 16 ಬಂಟ ಮನೆಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಎಲ್ಲರೂ ಒಂದೇ ಕುಟುಂಬದವರಂತೆ ಸೇರಿಕೊಂಡು ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ಬಹಳ ವಿಶೇಷವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 

ಸಭೆಯ ಅಧ್ಯಕ್ಷತೆಯನ್ನು ಅಕ್ಷಯ ಬಂಟರ ಸಮಿತಿಯ ಆಧ್ಯಕ್ಷ ಕೇಶವ ಶೆಟ್ಟಿಯವರು ವಹಿಸಿದ್ದರು, ವೇದಿಕೆಯಲ್ಲಿ ಅಕ್ಷಯ ಬಂಟರ ಸಮಿತಿಯ ಮಾಜಿ ಆಧ್ಯಕ್ಷ ಸೀತಾರಾಮ ಶೆಟ್ಟಿಯವರು, ಮಾತನಾಡಿ, ಹಿಂದಿನ ಕಾಲದಲ್ಲಿ, ಸೊಪ್ಪು , ತರಕಾರಿ,ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದೆವು, ಇಂದಿನ ಮಕ್ಕಳು ಇದರ ಮಹತ್ವವನ್ನು ತಿಳಿದುಕೊಂಡು ಸದ್ಭಳಕೆ ಮಾಡಿದಲ್ಲಿ, ಆರೋಗ್ಯಕರ ಜೀವನ ನಡೆಸಲು ಸಾಧ‍್ಯ ಎಂದರು,

ವೇದಿಕೆಯಲ್ಲಿ, ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಹಾಗೂ ಸದಸ್ಯರಾದ ಶ್ರೀಮತಿ ಪುಷ್ಪ ಶೆಟ್ಟಿ, ಹಾಗೂ, ಕೋಶಾಧಿಕಾರಿ ಸುಧಾಮಣಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಮನೆಗಳಿಂದ ಸುಮಾರು 30 ಕ್ಕಿಂತಲೂ ಅಧಿಕ ಆಹಾರ ಖಾದ್ಯಗಳು ಎಲ್ಲರ ಗಮನ ಸೆಳೆಯಿತು.

 

ಸುಷ್ಮಾ, ಹಾಗೂ, ದೀಪ್ತಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ , ಕು. ವೀಕ್ಷಾ ಆಟಿಯ ಹಿನ್ನಲೆ ಹಾಗೂ ಮಹತ್ವದ ಬಗ್ಗೆ ತಿಳಿಸಿದರು, ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!