ಬೆಳ್ತಂಗಡಿ: ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪಡ್ಲಾಡಿ ಲಾಯಿಲ. ಇದರ ವಾರ್ಷಿಕ ಸಭೆಯು ಉತ್ಸಾಹಿ ಯುವಕ ಮಂಡಲ ಪಡ್ಲಾಡಿಯಲ್ಲಿ ಜುಲೈ 27 ರಂದು ಸಮಿತಿಯ ಅಧ್ಯಕ್ಷ ರವಿ ಚಂದ್ರ ನಾಡೆಂಜ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ 2024ನೇ ಸಾಲಿನ ಕಾರ್ಯಕ್ರಮಗಳ ವರದಿಗಳನ್ನು ಕಾರ್ಯದರ್ಶಿ ಅನಿಲ್ ವಿಕ್ರಂ . ಸಭೆಯ ಮುಂದಿಟ್ಟರು, ಜಮಾ ಖರ್ಚು ವಿವರಗಳನ್ನು ಕೋಶಾಧಿಕಾರಿ ಸಂತೋಷ್ ಹಿಮರಡ್ಡ ನೀಡಿದರು. ನಂತರ 2025-26ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ
ಅಧ್ಯಕ್ಷರಾಗಿ ವಿನಯ್ ಎಂ
ಎಸ್., ಕಾರ್ಯದರ್ಶಿಯಾಗಿ ದಿನಕರ್, ಕೋಶಾಧಿಕಾರಿಯಾಗಿ ರಾಜೇಶ್ ಅಂಕಾಜೆ , ಜೊತೆ ಕಾರ್ಯದರ್ಶಿಯಾಗಿ ವರುಣ್, ಜೊತೆ ಕೋಶಾಧಿಕಾರಿಯಾಗಿ ಪವನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಆಗಸ್ಟ್ 15 ರಂದು 34 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಪಡ್ಲಾಡಿ ಶಾಲಾ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ಹಾಗೂ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ನಡೆಸುವ ಬಗ್ಗೆ ತೀರ್ಮಾನಿಸಿ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಅಧ್ಯಕ್ಷ ವಿನಯ್ ಎಂ
ಎಸ್
ಎಲ್ಲರ ಸಹಕಾರ ಕೋರಿದರು. ಕೊನೆಯಲ್ಲಿ ಕಾರ್ಯದರ್ಶಿ ದಿನಕರ್ ಧನ್ಯವಾದವಿತ್ತರು.