ಬೆಳ್ತಂಗಡಿ:ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ನಿರ್ಮಾಣದ ರಾಜ್ .ಬಿ. ಶೆಟ್ಟಿ, ಜೆ.ಪಿ. ತುಮಿನಾಡ್ ನಿರ್ದೆಶನದ
ಸು ಫ್ರಮ್ ಸೋ ಸಿನಿಮಾವು , ಕನ್ನಡ ಚಿತ್ರರಂಗದಲ್ಲೇ ಹೊಸ ಇತಿಹಾಸ ನಿರ್ಮಿಸುವತ್ತ ಹೆಜ್ಜೆ ಹಾಕುತ್ತಿದೆ. ಈ ಚಿತ್ರ ಮೊದಲ ಬಾರಿ ಸಿನಿಮಾ ರಿಲೀಸ್ ಆದ ಮೂರನೇ ದಿನಕ್ಕೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಜಾನೆ 6 ಗಂಟೆಗೆ ಪ್ರದರ್ಶನ ಇಡಲಾಗಿದೆ.ಒಟ್ಟು 120 ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಸಾಮಾನ್ಯವಾಗಿ ಬಹು ಭಾಷಾ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದ ಮೊದಲ ದಿನ ಮುಂಜಾನೆ 6 ಗಂಟೆಗೆ ಪ್ರದರ್ಶನಗೊಳ್ಳುವುದು ರೂಢಿ. ಆದರೆ ಹೊಸ ಕಲಾವಿದರ ಸಿನಿಮಾವೊಂದು ರಿಲೀಸ್ ಆದ ಮೂರನೇ ದಿನಕ್ಕೆ ವಿಪರೀತ ಬೇಡಿಕೆ ಗಿಟ್ಟಿಸಿಕೊಂಡು ಬೆಳಿಗ್ಗೆ 6 ಗಂಟೆಗೆ ಮೊದಲ ಶೋ ಪ್ರದರ್ಶಿಸುವ ಮೂಲಕ ಸು ಫ್ರಮ್ ಸೋ ಚಿತ್ರ ಇತಿಹಾಸ ನಿರ್ಮಿಸುತ್ತಿದೆ.ಚಿತ್ರ ವೀಕ್ಷಣೆ ಮಾಡಿದ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಾಹಿತಿ ಪ್ರಕಾರ ಸು ಫ್ರಮ್ ಸೋ ಸಿನಿಮಾದ ಮೊದಲ ದಿನ ರೂ 1ಕೋಟಿ ಮೀರಿರುವ ಸಾಧ್ಯತೆ ಇದೆ.ಒಟ್ಟಾರೆ ಮೊದಲ ದಿನ 1 ಲಕ್ಷಕ್ಕೂ ಅಧಿಕ ಮಂದಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಅದಲ್ಲದೇ 2025 ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಅತೀ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಸು. ಫ್ರಮ್ ಸೋ ಪಾತ್ರವಾಗಿದೆ.