ಬೆಳ್ತಂಗಡಿ, ತಾಲೂಕಿನಾದ್ಯಂತ ಭಾರೀ ಗಾಳಿ ಮಳೆ: ಹಲವೆಡೆ ಮನೆಗಳಿಗೆ ಹಾನಿ, ಮರ ಬಿದ್ದು ರಸ್ತೆ ಬ್ಲಾಕ್, ವಿದ್ಯುತ್ ವ್ಯತ್ಯಯ:

 

 

ಬೆಳ್ತಂಗಡಿ: ತಾಲೂಕಿನಾದ್ಯಂತ ಶನಿವಾರ  ಭಾರೀ  ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಅಪಾರ ಹಾನಿ ಸಂಭವಿಸಿದೆ.ತಡ ರಾತ್ರಿ ಉಜಿರೆ ಧರ್ಮಸ್ಥಳ ಹೆದ್ದಾರಿಯ ಕನ್ಯಾಡಿಯಲ್ಲಿ ಮರ ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಸ್ಥಳೀಯರು ಮರ ತೆರವುಗೊಳಿಸಿದರು.

ಬಾರ್ಯ ಗ್ರಾಮದ ಅನೆಪಲ್ಲ ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.ವರಕಬೆ ಎಂಬಲ್ಲಿ ಹೆದ್ದಾರಿಗೆ ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ತೊಂದರೆ ಉಂಟಾಯಿತು, ತಕ್ಷಣ ಸ್ಥಳೀಯರ ಸಹಕಾರದಲ್ಲಿ ಮರ ತೆರವು ಕೆಲಸ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.ಮಚ್ಚಿನದಲ್ಲಿ ಮನೆಗೆ ಮರ ಬಿದ್ದು ಹಾನಿಯಾಗಿದೆ.ಬೆಳ್ತಂಗಡಿ ಸಂಜಯ ನಗರ ಎಂಬಲ್ಲಿ ಮಳೆಗೆ ಮನೆಯ ಗೋಡೆ ಕುಸಿದು ಹಾನಿ ಉಂಟಾಗಿದೆ.ಮಚ್ಚಿನದಲ್ಲಿ ಮನೆಗೆ ಮರ ಬಿದ್ದು ಹಾನಿಯಾಗಿದೆ.ಶಿಶಿಲದಲ್ಲಿ ಭಾರೀ ಗಾಳಿಗೆ ಮನೆಯ ಶೀಟ್ ಹಾರಿ ಹೋಗಿದೆ.ನಡ ಗ್ರಾಮದ ಬೆದ್ರಪಲ್ಕೆ ಎಂಬಲ್ಲಿ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.ಪಾಲೇದು: ಅಗರಿಯಲ್ಲಿ ಮೂರು ಬಿದ್ದು ಮನೆಗೆ ಹಾನಿಯಾಗಿದೆ. ಪಾಲೇದು ಸಮೀಪದ ಪುತಿಲ ಗ್ರಾಮದ ಅಗರಿ ರಾಜಮ್ಮ ನಾಯ್ಕ್ ಅವರ ವಾಸದ ಮನೆಗೆ ಮರ ಬಿದ್ದು ಹಾನಿ ಉಂಟಾಗಿದೆ. ಬಾರ್ಯ ಗ್ರಾಮ ಪಂಚಾಯತ್ ಸದಸ್ಯ ವಸಂತ ಬೋಲ್ಡೆಲು ಹಾಗೂ ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಪಾಲೇದು, ಸ್ಥಳೀಯರಾದ ಪ್ರವೀಣ್, ಸುಹಾನ್ ಅವರು ರ್ಟಾಪಲ್ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು, ತಂತಿಗಳು ತುಂಡಾಗಿ ಬಿದ್ದಿರುವುದರಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.

error: Content is protected !!