ಬೆಳ್ತಂಗಡಿ:ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿ ಇಂದಿಗೂ ಕ್ಷೇತ್ರದ ಬಡ ಜನತೆಯಿಂದ ಪೂಜಿಸಲ್ಪಡುತ್ತಿರುವ ಕೀರ್ತಿಶೇಷ ಕೆ. ವಸಂತ ಬಂಗೇರರವರ 1ನೇ ಪುಣ್ಯಸ್ಮರಣೆಯ ಪ್ರಯುಕ್ತ ಅವರ ಕುಟುಂಬಸ್ಥರು ಬೆಳ್ತಂಗಡಿಯ ಗುರುನರಾಯಣ ವಾಣಿಜ್ಯ ಸಂಕೀರ್ಣದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹಕ್ಕೆ ಕೊಡ ಮಾಡಿದ ಬೆಳ್ಳಿ ಕಿರೀಟವನ್ನು ಮೇ 08 ರಂದು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಬಂಗೇರರವರ ಧರ್ಮಪತ್ನಿ, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಸುಜಿತಾ ವಿ ಬಂಗೇರ, ಅಳಿಯ ಉದ್ಯಮಿ ಧರ್ಮವಿಜೇತ್, ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್, ಸಂಘದ ನಿರ್ದೇಶಕ ಅನೂಪ್ ಬಂಗೇರ, ರಘುನಾಥ ಶಾಂತಿ ಮುಂತಾದವರು ಉಪಸ್ಥಿತರಿದ್ದರು.