ಉಡುಪಿ: ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
34 ವರ್ಷ ಪ್ರಾಯದ ಉಡುಪಿಯ ರಾಕೇಶ್ ಪೂಜಾರಿ ಅವರು ತನ್ನ ಹಾಸ್ಯ ನಟನೆಯ ಮೂಲಕ ಅಪಾರ ಖ್ಯಾತಿ ಪಡೆದಿದ್ದರು.ಸೋಮವಾರ ರಾತ್ರಿ ಕಾರ್ಕಳದಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ನೇಹಿತರ ಜತೆಯಲ್ಲಿರುವಾಗಲೇ ಅವರಿಗೆ ಹೃದಯಾಘಾತವಾಗಿದೆ.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರೆ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದರೆ ಎಂದು ತಿಳಿದು ಬಂದಿದೆ.ಕನ್ನಡದ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಕಿಲಾಡಿ ಸೀಸನ್ 3 ವಿಜೇತರಾಗಿದ್ದ ಅವರು, ತನ್ನ ವಿಭಿನ್ನ ಅಭಿನಯದಿಂದ ಕನ್ನಡಿಗರ ಮನಗೆದ್ದಿದ್ದರು.ಹಲವಾರೂ ಕನ್ನಡ , ತುಳು ಸಿನಿಮಾ ಹಾಗೂ ನಾಟಕದಲ್ಲಿ ಅಭಿನಯಿಸಿದ್ದಾರೆ. ಅವರ ನಿಧನದ ಸುದ್ಧಿ ಕೇಳಿ ರಕ್ಷಿತಾ ಪ್ರೇಮ್ ಸೇರಿ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.