ಮಂಗಳೂರು, ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ ಪ್ರಕರಣ: ಜಿಲ್ಲಾ ಬಂದ್ ಗೆ ಕರೆ ನೀಡಿದ ಹಿಂದೂ ಸಂಘಟನೆಗಳು: ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇದಾಜ್ಙೆ ಜಾರಿ:

 

 

 

 

ಬೆಳ್ತಂಗಡಿ: .‌ಮಂಗಳೂರಿನ ಬಜಪೆ ಸಮೀಪದ ಕಿನ್ನಿಬೆಟ್ಟು ಎಂಬಲ್ಲಿ ಕಳೆದ ರಾತ್ರಿ 8.30 ರ ಸುಮಾರಿಗೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ನಡು ರಸ್ತೆಯಲ್ಲೇ ತಲವಾರು ದಾಳಿ ನಡೆಸಿ ಕೊಲೆ ನಡೆಸಿ ಹಂತಕರು ಪರಾರಿಯಾಗಿದ್ದು, ಜಿಲ್ಲೆಯಲ್ಲಿ ಮತ್ತೆ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ವಿಶ್ವ ಹಿಂದೂ ಪರಿಷತ್ , ಸೇರಿದಂತೆ ಹಿಂದೂ ಪರ ಸಂಘಟನೆಗಳು ಹತ್ಯೆ ಖಂಡಿಸಿ ಇಂದು ಬಂದ್ ಗೆ ಕರೆ ನೀಡಿದೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮೇ 06 ರವರೆಗೆ ನಿಷೇದಾಜ್ಙೆ ಜಾರಿಗೊಳಿಸಲಾಗಿದೆ.ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

error: Content is protected !!