ಬೆಳ್ತಂಗಡಿ: ಮಂಗಳೂರಿನ ಬಜಪೆ ಸಮೀಪದ ಕಿನ್ನಿಬೆಟ್ಟು ಎಂಬಲ್ಲಿ ಎ 01 ರ ರಾತ್ರಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಬರ್ಬರವಾಗಿ ಹತ್ಯೆಯಾಗಿದ್ದು , ಜಿಲ್ಲೆಯಾದ್ಯಂತ ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿ ಜಿಲ್ಲಾ ಬಂದ್ ಗೆ ಕರೆ ನೀಡಿದ್ದು ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.ಬಾರ್ ವೈನ್ಸ್ ಶಾಪ್ ಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಭಾಗಶಃ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್ ಆಗಿವೆ.ಅಲ್ಲಲ್ಲಿ ಟಯರ್ ಗೆ ಬೆಂಕಿ ಹಚ್ಚಲಾಗಿದೆ. ಬೆಳ್ತಂಗಡಿ ಉಪ್ಪಿನಂಗಡಿ ಸಂಚಾರಿಸುವ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ.ಜಿಲ್ಲೆಯಲ್ಲಿ ಅಲ್ಲಲ್ಲಿ ಅಹಿತಕರ ಘಟನೆಗಳು ನಡೆಯುತಿದ್ದು, ಜಿಲ್ಲೆಯಲ್ಲಿ ನಿಷೇದಾಜ್ಙೆ ಜಾರಿಯಲ್ಲಿದೆ.