ಬೆಳ್ತಂಗಡಿ ಸಿಡಿಲು ಮಿಂಚು ಸಹಿತ ಭಾರೀ ಮಳೆ, ಹಲವೆಡೇ ಹಾನಿ:ಹೆದ್ದಾರಿಯಲ್ಲಿ ಸವಾರರು ಕಂಗಾಲು:ಸಿಡಿಲು ಬಡಿದು ಹಸು ಸಾವು:ಕೈಕೊಟ್ಟ ಕರೆಂಟ್:

 

 

 

ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಸಿಡಿಲು ಮಿಂಚು ಸಹಿತ ಭಾರೀ ಮಳೆಯಾಗಿದ್ದು,ಕೆಲವೆಡೆ ಹಾನಿ ಸಂಭವಿಸಿದೆ. ಸಿಡಿಲಿನಘಾತಕ್ಕೆ ಕಲ್ಮಂಜ ಗ್ರಾಮದಲ್ಲಿ ಹಸುವೊಂದು ಅಸು ನೀಗಿದೆ. ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿ ಸಹಿತ ಮಳೆಗೆ ವಿದ್ಯುತ್ ಕೈಕೊಟ್ಟಿದೆ.ಚಾರ್ಮಾಡಿ ಗ್ರಾಮದ ಕತ್ತರಿಗುಡ್ಡೆ ಎಂಬಲ್ಲಿ ಮನೆಗೆ ಹಾನಿ ಸಂಭವಿಸಿದೆ.ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತಿದ್ದು ಅನಿರೀಕ್ಷಿತ ಮಳೆಯಿಂದಾಗಿ ರಸ್ತೆಯಲ್ಲೇ ಮಳೆ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.

error: Content is protected !!