ಎಕ್ಸೆಲ್ ಕಾಲೇಜಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ಪಂಚಪರ್ವ ಅಂಗವಾಗಿ ವಿದ್ಯಾಗಣಪತಿ ದೇವರ ವಿಗ್ರಹ ಅನಾವರಣ:

 

 

 

ಬೆಳ್ತಂಗಡಿ; ಗುರುವಾಯನಕೆರೆ ಪ್ರತಿಷ್ಠಿತ ಎಕ್ಸೆಲ್ ವಿದ್ಯಾಸಂಸ್ಥೆಯ ಅರಮಲೆಬೆಟ್ಟ ಕ್ಯಾಂಪಸ್ ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎ. 20 ರಂದು‌ ಭೇಟಿ ನೀಡಿ ಎಕ್ಸೆಲ್ ಸಮೂಹ ಸಂಸ್ಥೆಗಳ ಐದು ವರ್ಷಗಳ ಸಾರ್ಥಕ ವಿದ್ಯಾ ಸೇವೆಯ ಸಂಭ್ರಮದ ಎಕ್ಸೆಲ್ ಪಂಚ ಪರ್ವ ಅಂಗವಾಗಿ ಶ್ರೀ ವಿದ್ಯಾ ಗಣಪತಿ ದೇವರ ವಿಗ್ರಹವನ್ನು ಅನಾವರಣ ಗೊಳಿಸಿದರು.

ಬಳಿಕ ಮಾತನಾಡಿದ ಅವರು ವಿದ್ಯೆಗೆ ನಾಯಕ ವಿನಾಯಕ.ಅಮ್ಮನ ನೆನಪು ಪ್ರೀತಿಯ ಮೂಲ.ಯಾರು ಕಸಿಯಲಾಗದ ದೊಡ್ಡ ಶಕ್ತಿ ಶಿಕ್ಷಣ.ಸಣ್ಣ ಪ್ರಾಯದಲ್ಲಿ ಎಕ್ಸೆಲ್ ಅಂತಹ ಸಂಸ್ಥೆ ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸುಮಂತ್ ಕುಮಾರ್ ಜೈನ್ ಯುವ ಸಮಾಜಕ್ಕೆ ಪ್ರೇರಣೆ.ಎಕ್ಸೆಲ್ ವಿದ್ಯಾಸಂಸ್ಥೆ ಪಿಯುಸಿ,ಜೆಇಇ,ನೀಟ್,ಸಿಇಟಿ ಗಳಲ್ಲಿ ಉತ್ತಮ ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯಾದ್ಯಂತ ಹೆಸರುವಾಸಿ ಆಗಿದೆ ಎನ್ನುತ್ತಾ ಸಂಸ್ಥೆಯ‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಎಕ್ಸೆಲ್ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

 

 

 

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ವಹಿಸಿ ಮಾತನಾಡಿ 254 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಎಕ್ಸೆಲ್ ಸಂಸ್ಥೆಯಲ್ಲಿ 3 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ವೇದಿಕೆಯಲ್ಲಿ ಬೆಳ್ತಂಗಡಿ ಬೆಸ್ಟ್ ಪೌಂಢೇಶನ್ ಅಧ್ಯಕ್ಷ ರಕ್ಷಿತ್ ಶಿವಾರಂ,ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ,ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ಮಾಜಿ ಸಚವ ಅಭಯಚ್ಚಂದ್ರ ಜೈನ್,ಪ್ರಾಂಶುಪಾಲ ಡಾ. ನವೀನ್ ಮರಿಕೆ, ಪ್ರಭಾರ ಪ್ರಾಂಶುಪಾಲ ಡಾ. ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು .

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಪ್ರಮುಖರಾದ ಸತೀಶ್ ಕಾಶಿಪಟ್ಣ,ಅಭಿನಂದನ್ ಹರೀಶ್ ಕುಮಾರ್,ನಾಗೇಶ್ ಕುಮಾರ್ ಗೌಡ, ಸಂತೋಷ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ‌ ನಿರೂಪಿಸಿದರು.

error: Content is protected !!