ಬೆಳಾಲು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅವ್ಯವಹಾರ; ಸಿಬ್ಬಂದಿಗಳಿಂದ ಲಕ್ಷಾಂತರ ರೂಪಾಯಿ ವಂಚನೆ ಬೆಳಕಿಗೆ:

 

 

ಬೆಳ್ತಂಗಡಿ : ಬೆಳಾಲು ಸೊಸೈಟಿಯಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಿಬ್ಬಂದಿಗಳಿಬ್ಬರು ಸೇರಿ 34 ಲಕ್ಷ ರೂಪಾಯಿ ಅವ್ಯವಹಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

 

 

ಮಾಹಿತಿ ಪ್ರಕಾರ ಈ ಸಂಘದ ಮ್ಯಾನೇಜರ್ ಅಗಿರುವ ನಾರಾಯಣ ಗೌಡ ಅವರ ಗಮನಕ್ಕೆ ಬಾರದೆ  ಈ ಕೃತ್ಯ ನಡೆದಿದ್ದು . ವಾರ್ಷಿಕ ಲೆಕ್ಕ ಪತ್ರ ಪರಿಶೋಧನೆ ವೇಳೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ ಅಂತರಿಕ  ತನಿಖೆ ನಡೆಸಿದಾಗ ಸಂಘದ ಸಿಬ್ಬಂದಿಗಳಾದ ಪ್ರಶಾಂತ್ ಗೌಡ ಮತ್ತು ಸದಾಶಿವ @ ಸುಜಿತ್ ಕೋಟ್ಯಾನ್ ಇಬ್ಬರು ಸೇರಿಕೊಂಡು ವಂಚನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ‌.

ಈ ಪ್ರಕರಣ ಬಗ್ಗೆ ಸಂಘದ ಅಧ್ಯಕ್ಷ ಪದ್ಮಗೌಡ ಅವರನ್ನು ಏ.22 ರಂದು ಮಾಧ್ಯಮದವರು ಕರೆ ಮಾಡಿ ಸಂಪರ್ಕಿಸಿ ಮಾಹಿತಿ ಪಡೆದಾಗ ಕೋಟ್ಯಾಂತರ ರೂಪಾಯಿ ವಂಚನೆ ಅಗಿಲ್ಲ ಸುಮಾರು 34 ಲಕ್ಷ ರೂಪಾಯಿ ಗೋಲ್ಮಾಲ್ ಮಾಡಿರುವುದನ್ನು ಸಿಬ್ಬಂದಿಗಳಿಬ್ಬರು ಒಪ್ಪಿಕೊಂಡಿದ್ದು ಇದರಲ್ಲಿ 50% ಹಣ ವಾಪಸ್ ನೀಡಿದ್ದಾರೆ ಉಳಿದ ಹಣವನ್ನು ಕೆಲವು ದಿನಗಳಲ್ಲಿ ವಾಪಸ್ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

error: Content is protected !!