ಬೆಳ್ತಂಗಡಿ: ತಾಲೂಕಿನ ವಿವಿಧ ಕಡೆಗಳಲ್ಲಿ ಬುಧವಾರ ಸಂಜೆಯಿಂದ ಗಾಳಿ ಮಳೆಯಾಗಿದ್ದು, ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಧರಗುರುಳಿದೆ. ಗುರುವಾಯನಕೆರೆ ವೇಣೂರು ರಸ್ತೆಯಲ್ಲಿ ಭಾರೀ ಗಾಳಿಗೆ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ಮುರಿದು ರಸ್ತೆಗೆ ಉರುಳಿ ಬಿದ್ದಿದೆಯಲ್ಲದೇ ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ. ಗರ್ಡಾಡಿ, ಸೋಣಂದೂರು ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಈಗಾಗಲೇ ಮೆಸ್ಕಾಂ ಸಿಬ್ಬಂದಿಗಳು ಸ್ಥಳದಲ್ಲಿದ್ದು, ರಸ್ತೆಗೆ ಬಿದ್ದ ಮರ ಹಾಗೂ ವಿದ್ಯುತ್ ಕಂಬಗಳು, ತಂತಿಗಳನ್ನು ತೆರವುಗೊಳಿಸುವ ಕಾರ್ಯ ಮಾಡುತಿದ್ದಾರೆ.ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡತಗೊಂಡಿದೆ.
ಉಜಿರೆ, ಗುರಿಪಳ್ಳ, ಕಕ್ಕಿಂಜೆ, ಚಾರ್ಮಾಡಿ ಭಾಗಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಬಿಸಿಲಿನ ಬೇಗೆಯಲ್ಲಿ ನಲುಗಿದ ತಾಲುಕಿನ ಜನತೆ ಮೊದಲ ಮಳೆಯ ವೇಳೆ ಬೀಸಿದ ಭಾರೀ ಗಾಳಿಯಿಂದಾಗಿ ಮರ ಬಿದ್ದ ಪರಿಣಾಮ ಕರೆಂಟ್ ಇಲ್ಲದೇ ಪರದಾಡುವಂತಾಗಿದೆ. ಹಲವಾರೂ ಕಂಬಗಳು ಉರುಳಿ ಬಿದ್ದ ಪರಿಣಾಮ ಇವತ್ತು ಕರೆಂಟ್ ಬರುವುದು ಅನುಮಾನ ಎಂಬ ಮಾಹಿತಿ ಲಭ್ಯವಾಗಿದೆ.